ಪಾಲಿಕೆ ವೆಬ್‌ಸೈಟ್‌ನಲ್ಲಿ ನೋಡಲ್ ಅಧಿಕಾರಿ ಮಾಹಿತಿ : ಕರೆ ಮಾಡಿ ಸಮಸ್ಯೆ ಹಂಚಿಕೊಳ್ಳಿ

bbmp
Published on

ಬೆಂಗಳೂರು: ಕರೊನಾ ಸಂಕಷ್ಟ, ಮಳೆಯಿಂದ ಪ್ರವಾಹ ಸೃಷ್ಟಿ, ರಸ್ತೆಗುಂಡಿ, ಸ್ವಚ್ಛತೆ ಕೊರತೆ ಸಂಬಂಧಿಸಿದಂತೆ ಯಾವುದೇ ದೂರು ನೀಡಲು ಪಾಲಿಕೆ ಸದಸ್ಯರು ಅಧಿಕಾರದಲ್ಲಿಲ್ಲ. ಹೀಗಾಗಿ, ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ನಲ್ಲಿ (https://bbmp.gov.in/nodalofficerkannada12.html) 198 ವಾರ್ಡ್‌ಗಳ ನೋಡಲ್ ಅಧಿಕಾರಿಗಳ ಪೂರ್ಣ ವಿವರ ಮತ್ತು ಮೊಬೈಲ್ ನಂಬರ್ ನೀಡಲಾಗಿದ್ದು, ಸಾರ್ವಜನಿಕರು ಕರೆ ಮಾಡಿ ಸಮಸ್ಯೆ ಹಂಚಿಕೊಳ್ಳಬಹುದು. ನೋಡಲ್ ಅಧಿಕಾರಿಗಳು ಪ್ರತಿ ತಿಂಗಳ ಮೊದಲ ಮತ್ತು 3ನೇ ಶನಿವಾರ ವಾರ್ಡ್ ಮಟ್ಟದ ಸಭೆ ನಡೆಸಿ ಸ್ಥಳಿಯ ಸಮಸ್ಯೆ ಆಲಿಸಲಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net