

ಮಸ್ಕಿ: ಮಗ್ಗಿ, ದೇಶಗಳ ಹೆಸರು ಸೇರಿ ಎಲ್ಲವನ್ನೂ ಪಟಪಟನೆ ಹೇಳುವ ಪಟ್ಟಣದ ನಾಲ್ಕು ವರ್ಷದ ಬಾಲಕಿ ಸುಧೀಶ್ನು ಪಠವಾರಿ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಸಾಧನೆ ಮಾಡಿದ್ದು, ಗುರುವಾರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಪ್ರಶಸ್ತಿ, ಪ್ರಮಾಣ ಪತ್ರ ನೀಡಿದರು.
ಸುಧೀಶ್ನು ಪಠವಾರಿ 5.40 ನಿಮಿಷದಲ್ಲಿ 1ರಿಂದ 17 ರವರೆಗೆ ಮಗ್ಗಿ, ನಾಲ್ಕು ನಿಮಿಷದಲ್ಲಿ 60 ದೇಶಗಳ ಹೆಸರು, ಅಲ್ಲದೇ ಒಂದು ನಿಮಿಷದಲ್ಲಿ 1 ರಿಂದ 30 ರವರೆಗೆ ಸ್ವ್ಕಾಯರ್ ನಂಬರ್ಸ್, 25 ಇನ್ವೆಂಟರ್ ಇನ್ವೇಷನ್, 30 ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ, 1.15 ನಿಮಿಷದಲ್ಲಿ 27 ಅಪೋಸಿಟ್ ವಡ್ಸ್, 32 ಸೆಕೆಂಡ್ಸ್‌ನಲ್ಲಿ 25 ಇಂಗ್ಲಿಷ ರೈಮ್ಸ್, 4.20 ನಿಮಿಷದಲ್ಲಿ 50 ಪಿರಾಡಿಕ್ ಎಲಿಮೆಂಟ್ಸ್ ಹಾಗೂ ತಲಾ ಒಂದು ನಿಮಿಷದಲ್ಲಿ 29 ರಾಜ್ಯದ ರಾಜಧಾನಿಗಳ ಹೆಸರು ಹಾಗೂ 10 ದೇಶದ ಕರೆನ್ಸಿ ಗುರುತಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಪ್ರಶಸ್ತಿ, ಪ್ರಮಾಣ ಪತ್ರ ನೀಡುವ ವೇಳೆ ಅಕ್ಷರ ವೇದ್ಯ ಆಂಗ್ಲ ಮಾಧ್ಯಮ ಶಾಲೆ ಪ್ರಧಾನ ಕಾರ್ಯದರ್ಶಿ ವಿನೋದ ದೇಶಮುಖ, ಪಠವಾರಿ ಕುಟುಂಬದವರು, ಹನುಮೇಶ ಕುಲಕರ್ಣಿ ಮತ್ತು ಶಾಲೆಯ ಪ್ರಮುಖರಾದ ಬಾಲಾಜಿ ಸಿಂಗ್ ಠಾಕೂರ್, ಪವನ್ ಸಿಂಗ್ ಠಾಕೂರ್ ಇದ್ದರು.