ಕೀಟನಾಶಕ ಪೂರೈಸಿದರೂ ಆಶ್ಚರ್ಯವಿಲ್ಲ!: ಸರ್ಕಾರದ ವಿರುದ್ಧ ಕಟು ಟೀಕೆ

R Ashoka
Published on

ಬೆಂಗಳೂರು: ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೆ ಕುತ್ತು ತಂದರೂ ಆಶ್ಚರ್ಯ ಪಡಬೇಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

"ಮನುಷ್ಯರ ಬಳಕೆಗೆ ಪಶುಗಳ ಔಷಧ ಪೂರೈಕೆ' ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ಶನಿವಾರ ವಿಶೇಷ ವರದಿ ಪ್ರಕಟಗೊಂಡ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅಶೋಕ್​, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶುಗಳ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಮಾಡಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್​ ಸರ್ಕಾರ, ನಾಳೆ ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೆ ಕುತ್ತು ತಂದರೂ ಅಚ್ಚರಿಪಡಬೇಕಿಲ್ಲ. "ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲೊಂದು ಎಡವಟ್ಟುಗಳಿಂದಲೇ ಸುದ್ದಿಯಾಗಿರುವ "ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​-ಕರ್ನಾಟಕ ಸರ್ಕಾರ'ಕ್ಕೆ ಯಾವ ಇಲಾಖೆಯಲ್ಲೂ ಆಡಳಿತದ ಮೇಲೆ ನಿಯಂತ್ರಣವೇ ಇಲ್ಲದೆ ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿ ಸೃಷ್ಟಿಯಾಗಿದೆ' ಎಂದು ತಮ್ಮ ೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net