ರೈಲ್ವೆ ನೇಮಕಾತಿಯಲ್ಲಿ ಕರ್ನಾಟಕಕ್ಕಿಲ್ಲ ಹುದ್ದೆಗಳು

21 Dwd 1
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ರೈಲ್ವೆ ಇಲಾಖೆಯು ಪ್ರತಿವರ್ಷ ಲಕ್ಷಾಂತರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತದೆ. ಇದಕ್ಕಾಗಿ ಕೇಂದ್ರಿಕೃತ ನೇಮಕಾತಿ ಅಽಸೂಚನೆಗಳನ್ನು (ಸಿಇಎನ್) ಹೊರಡಿಸುತ್ತದೆ. ಅದರಂತೆ ಈ ವರ್ಷದ ಮೊದಲ ಅಽಸೂಚನೆ ಸಿಇಎನ್-01 ಹೊರಬಿದ್ದಿದೆ. ಇದರ ಮೂಲಕ ಒಟ್ಟು 9,970 ಅಸಿಸ್ಟೆಂಟ್ ಲೋಕೋ ಪೈಲಟ್ (ಎಎಲ್‌ಪಿ) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿಪರ್ಯಾಸವೆಂದರೆ, ಬೆಂಗಳೂರು ನೇಮಕಾತಿ ಮಂಡಳಿ ವ್ಯಾಪ್ತಿಯಲ್ಲಿ ಒಂದೂ ಹುದ್ದೆಗಳೇ ಇಲ್ಲವಾಗಿವೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವಿದ್ದರೂ ಇದರ ಪ್ರಯೋಜನ ರಾಜ್ಯದ ಕನ್ನಡಿಗರಿಗೆ ದಕ್ಕದಂತಾಗಿದೆ.

ನೆರೆಯ ಸಿಕಂದರಾಬಾದ್‌ನಲ್ಲಿ ಬರೋಬ್ಬರಿ 1,500, ಚೆನ್ನೆÊನಲ್ಲಿ 362, ಮುಂಬೈನಲ್ಲಿ 740, ದೂರದ ಕೋಲ್ಕತದಲ್ಲಿ 868 ಹುದ್ದೆಗಳು ಭರ್ತಿಯಾಗುತ್ತಿದ್ದರೂ ರಾಜ್ಯವ್ಯಾಪ್ತಿಯಲ್ಲಿ ಒಂದೂ ಹುದ್ದೆಗಳಿಲ್ಲದಿರುವುದು ಅಚ್ಚರಿ ಮೂಡಿಸಿದೆ. ವಿಶೇಷವೆಂದರೆ ಕೋಲ್ಕತದ ಮೆಟ್ರೋ ರೈಲಿಗೂ ಇದೇ ನೇಮಕಾತಿ ಅಽಸೂಚನೆ ಮೂಲಕವೇ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

* ಯಾವ ವಲಯಕ್ಕೆ ಎಷ್ಟು ಹುದ್ದೆಗಳು?

ಅಹಮದಾಬಾದ್- 497, ಅಜ್ಮೇರ್- 820, ಪ್ರಯಾಗರಾಜ್- 588, ಭೋಪಾಲ್- 664, ಭುವನೇಶ್ವರ್- 928, ಬಿಲಾಸ್‌ಪುರ- 568, ಚಂಡಿಗಢ್- 433, ಚೆನ್ನೆÊ- 362, ಗೋರಖ್‌ಪುರ-100, ಗುವಾಹಟಿ- 30, ಜಮ್ಮು- ಶ್ರೀನಗರ-8, ಕೋಲ್ಕತ- 868, ಮಾಲ್ಡಾ- 434, ಮುಂಬೈ- 740, ಮುಝಪ್ಪರ್‌ಪುರ್- 89, ಪಟನಾ- 33, ರಾಂಚಿ-1,213, ಸಿಕಂದರಾಬಾದ್- 1,500, ಸಿಲಿಗುರಿ-95, ತಿರುವನಂತಪುರ- 15.

* ಬೆಂಗಳೂರು ಪಾಲ್ಗೊಳ್ಳದಿರುವುದೇಕೆ?:

ದೇಶದಲ್ಲಿ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ)ಗಳಿವೆ. ದೇಶದ ಎಲ್ಲ ರೈಲ್ವೆ ವಲಯಗಳನ್ನು ಇವು ಪ್ರತಿನಿಽಸಿ ಆಯಾ ವಲಯ ವ್ಯಾಪ್ತಿಯ ನೇಮಕಾತಿಗಳನ್ನು ನೆರವೇರಿಸುತ್ತವೆ. ಈ ಪೈಕಿ 20 ಆರ್‌ಆರ್‌ಬಿಗಳು ಎಎಲ್‌ಪಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿವೆ. ಆದರೆ, ನೈಋತ್ಯ ರೈಲ್ವೆ ವಲಯವನ್ನು ಪ್ರತಿನಿಽಸುವ ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿ ಮಾತ್ರ ಸಿಇಎನ್-01ರಲ್ಲಿ ಪಾಲ್ಗೊಂಡಿಲ್ಲ.

* ಅಽಕಾರಿಗಳ ಮೌನ:

ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿ ಈ ಪ್ರಕ್ರಿಯೆಯಲ್ಲಿ ಏಕೆ ಪಾಲ್ಗೊಂಡಿಲ್ಲ ಎಂಬ ಪ್ರಶ್ನೆಗೆ ನೈಋತ್ಯ ರೈಲ್ವೆ ಅಽಕಾರಿಗಳ ಬಳಿ ಉತ್ತರವಿಲ್ಲ. ಇದು ರಾಷ್ಟಿçÃಯ ಮಟ್ಟದಲ್ಲಿ ನಡೆಯುತ್ತದೆ, ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ವಲಯ ವ್ಯಾಪ್ತಿಯಲ್ಲಿ ಖಾಲಿ ಎಎಲ್‌ಪಿ ಹುದ್ದೆಗಳೇ ಇಲ್ಲವೇ ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ. ಕೆಲವೊಮ್ಮೆ ಹುದ್ದೆಗಳ ಪರಿಷ್ಕೃತ ಪಟ್ಟಿಯನ್ನು ಆರ್‌ಆರ್‌ಬಿಗಳು ಬಿಡುಗಡೆ ಮಾಡುತ್ತವೆ. ಈ ಹಂತದಲ್ಲಿ ಬೆಂಗಳೂರು ಆರ್‌ಆರ್‌ಬಿ ವ್ಯಾಪ್ತಿಯಲ್ಲಿ ಹುದ್ದೆಗಳು ಪರಿಷ್ಕರಣೆಗೊಂಡರೆ, ರಾಜ್ಯದವರಿಗೆ ಕನಾಟಕದಲ್ಲಿಯೇ ಉದ್ಯೋಗ ಪಡೆಯುವ ಅವಕಾಶ ದೊರೆಯಬಹುದು. ಆದರೆ, ಈ ಬಗ್ಗೆಯೂ ಅಽಕಾರಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ. ಬೇರೆ ಆರ್‌ಆರ್‌ಬಿಗಳಿಗೆ ಅರ್ಜಿ ಸಲ್ಲಿಸಬಹುದು ಎಂಬುದಷ್ಟೇ ಸಮಾಧಾನಕರ ವಿಷಯ. 20 ಆರ್‌ಆರ್‌ಬಿಗಳ ವ್ಯಾಪ್ತಿಯಲ್ಲಿ ಪ್ರತಿವರ್ಷ ನೇಮಕಾತಿ ನಡೆದರೂ ಈ ವರ್ಷವೂ ಪಾಲ್ಗೊಂಡಿವೆ.

ಕನ್ನಡದಲ್ಲೂ ಬರೆಯಬಹುದು:

ಈ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದಾದರೂ ಕರ್ನಾಟಕದ ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ಹುದ್ದೆಗಳು ಲಭ್ಯವಿಲ್ಲ. ದೂರದ ಪ್ರದೇಶಗಳಿಗೆ ಅರ್ಜಿ ಸಲ್ಲಿಸಿದರೂ, ಉತ್ತರ ಭಾರತದವರ ಪೈಪೋಟಿ ಎದುರಿಸುವುದು ಅನಿವಾರ್ಯವಾಗುತ್ತದೆ.

ಯಾರು ಅರ್ಹರು?:

18-30 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ವಿವಿಧ ಮೀಸಲಾತಿಗೆ ಸಂಬAಽಸಿದAತೆ ವಯೋ ಸಡಿಲಿಕೆ ಇರಲಿದೆ. ಏಳನೇ ವೇತನ ಆಯೋಗದ ಅನ್ವಯಿಸುವಂತೆ ಲೆವೆಲ್-2 ಹುದ್ದೆಗಳು ಇವಾಗಿದ್ದು, 19,900 ರೂ. ಆರಂಭಿಕ ವೇತನ ಇರಲಿದೆ.

ವಿದ್ಯಾರ್ಹತೆ:

ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪೂರ್ಣಗೊಳಿಸಿರಬೇಕು. ಫಿಟ್ಟರ್, ಇಲೆಕ್ಟಿçಷಿಯನ್, ಇನ್‌ಸ್ಟುçಮೆಂಟ್ ಮೆಕಾನಿಕ್, ಮಿಲ್‌ರೈಟ್, ಮೆಂಟೇನೆನ್ಸ್ ಮೆಕಾನಿಕ್, ಮೆಕಾನಿಕ್ (ರೇಡಿಯೋ, ಟಿವಿ), ಇಲೆಕ್ಟಾçನಿಕ್ ಮೆಕಾನಿಕ್, ಮೆಕಾನಿಕ್ (ಮೋಟಾರ್ ವೆಹಿಕಲ್) ವೈರ್‌ಮನ್, ಟ್ರಾ÷್ಯಕ್ಟರ್ ಮೆಕಾನಿಕ್, ಆರ್ಮೇಚರ್ ಆ್ಯಂಡ್ ಕಾಯಿ ವೈಂಡರ್, ಮೆಕಾನಿಕ್ (ಡೀಸೆಲ್), ಹೀಟ್ ಇಂಜಿನ್, ಟರ್ನರ್, ಮಷಿನಿಸ್ಟ್, ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಷನಿAಗ್ ಮೆಕಾನಿಕ್ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರು ಅರ್ಜಿ ಸಲ್ಲಿಸಬಹುದು. ಏ. 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 11 ಕೊನೆಯ ದಿನವಾಗಿದೆ.

ಇನ್ನು, ಎಸ್‌ಎಸ್‌ಎಲ್‌ಸಿ ಬಳಿಕ ಇದೇ ಟ್ರೇಡ್‌ನಲ್ಲಿ ಅಪ್ರೆಂಟೀಸ್‌ಶಿಪ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಬಳಿಕ ಮೆಕಾನಿಕಲ್, ಇಲೆಕ್ಟಿçಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಇಂಜಿನಿಯರಿAಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪಡೆದವರು, ಇಂಜಿನಿಯರಿ0ಗ್ ಪದವಿ ಪಡೆದವರು ಕೂಡ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಆಯ್ಕೆ ಹೇಗೆ? ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಹಂತವು ಅರ್ಹತಾದಾಯಕವಾಗಿದ್ದು, ಈ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ. ಎರಡನೇ ಹಂತದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ.

ರೈಲ್ವೆ ಇಲಾಖೆ ನೌಕರಿಗಾಗಿ ಲಕ್ಷಾಂತರ ಆಕಾಂಕ್ಷಿಗಳು ಕಾಯುತ್ತಿರುತ್ತಾರೆ. ಇಲಾಖೆಯ ನೇಮಕಾತಿ ಪ್ರಕ್ರಿಯೆ ತತ್ಕಾಲ್ ರೀತಿಯಲ್ಲಿ ನಡೆಯಬೇಕು. ಖಾಲಿ ಹುದ್ದೆಗಳ ಭರ್ತಿಯಾದರೆ ಯುವಕರಿಗೆ ಉದ್ಯೋಗಾವಕಾಶ ಸಿಗುತ್ತವೆ. - ಮಹೇಂದ್ರ ಸಿಂಘಿ, ಸದಸ್ಯ, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ನೈಋತ್ಯ ರೈಲ್ವೆ) 2024ರಲ್ಲಿ 1,576 ಎಎಲ್‌ಪಿಗಳು ಮತ್ತು ಭಡ್ತಿ ಕೋಟಾದಡಿ 929 ಎಎಲ್‌ಪಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗಾಗಿ ಈ ಬಾರಿಯ ನೇಮಕಾತಿಯಲ್ಲಿ ಪಾಲ್ಗೊಂಡಿಲ್ಲ. - ಮಂಜುನಾಥ ಕನಮಡಿ, ಸಿಪಿಆರ್‌ಒ, ನೈಋತ್ಯ ರೈಲ್ವೆ ನಾನು ಐಟಿಐ ಫಿಟ್ಟರ್ ತಾಂತ್ರಿಕ ಕೋರ್ಸ್ ಮಾಡಿದ್ದು, ರೈಲ್ವೆ ಇಲಾಖೆ ನೌಕರಿಗಾಗಿ ನೈಋತ್ಯ ರೈಲ್ವೆಯಲ್ಲಿ 1 ವರ್ಷ 3 ತಿಂಗಳು ಅಪ್ರಂಟಿಶಿಪ್ ತರಬೇತಿ ಪಡೆದಿದ್ದೇನೆ. 2025ರ ಮೊದಲ ಅಽಸೂಚನೆ ಹೊರಡಿಸಲಾಗಿದ್ದು, ರಾಜ್ಯವಾರು ಎಎಲ್‌ಪಿ ಹುದ್ದೆಗಳಿಲ್ಲ. ಇದರಿಂದಾಗಿ ಕರ್ನಾಟಕದವರು ಬೇರೆ ಹೊರರಾಜ್ಯಗಳ ಹುದ್ದೆಗೆ ಅರ್ಜಿ ಹಾಕಬೇಕು. ಸ್ಪರ್ಧೆ ಹೆಚ್ಚಾಗುವುದಲ್ಲದೆ, ನೇಮಕವಾದರೆ ಬೇರೆ ರಾಜ್ಯಗಳಲ್ಲಿ ನೌಕರಿ ಮಾಡಬೇಕು. - ಬಸವರಾಜ ಎ., ಎಎಲ್‌ಪಿ ಹುದ್ದೆಯ ಅರ್ಜಿದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net