ಬಿಜೆಪಿ ಬಿಡುವ ಮಾತೇ ಇಲ್ಲ: ಬೈರತಿ ಬಸವರಾಜ ಸ್ಪಷ್ಟನೆ

Bairati
Published on

ಬೆಂಗಳೂರು: ಬಿಜೆಪಿ ಬಿಡುವ ಮಾತೇ ಇಲ್ಲ. ನಾವು ಪಕ್ಷದಲ್ಲೇ ಇದ್ದೇವೆ. ನಮಗೆ ಪಕ್ಷ ಸರಿಯಾದ ಗೌರವ ಕೊಟ್ಟಿದೆ ಎಂದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಳಿ ಸುದ್ದಿ ಹಬ್ಬಿಸೋದು ಸರಿಯಲ್ಲ. ನಾವು ಪಕ್ಷದಲ್ಲಿ ಇದ್ದೇವೆ. ನಮಗೆ ಪಕ್ಷ ಸರಿಯಾದ ಗೌರವ ಕೊಟ್ಟಿದೆ. ಇಲ್ಲಿದ್ದೇ ಕೆಲಸ ಮಾಡುತ್ತೇವೆ. ಪಕ್ಷ ಬಿಡುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೆ ಹೈಕಮಾಂಡ್ ಬೆಂಬಲ ನೀಡುತ್ತಿದೆ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ನಮ್ಮನ್ನು ವಿಚಲಿತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಸವರಾಜ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net