

ಕೊರಟಗೆರೆ: ಎತ್ತಿನಹೊಳೆ ಯೋಜನೆ ಕಾಮಗಾರಿ ಮತ್ತು ಕಲ್ಲು ಗಣಿಗಾರಿಕೆ ನಡೆಸಲು ಕೋಳಾಲ-ತಂಗನಹಳ್ಳಿ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಪಡೆಯದೆ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ ಎಂದು ಆರೋಪಿಸಿ ರೈತಸಂಘ ಮತ್ತು ಹಸಿರುಸೇನೆ ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕಂದಾಯ ಇಲಾಖೆ ಆವರಣದಲ್ಲಿ ರೈತಸಂಘ ಮತ್ತು ಹಸಿರುಸೇನೆ ಘಟಕ, ಜಿಪಂ ಸದಸ್ಯರು ಮತ್ತು ತಂಗನಹಳ್ಳಿಯ ನೂರಾರು ರೈತ ಮುಖಂಡರು ಪ್ರತಿಭಟಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಯಾರಿ ಮಾಡಿರುವಂತಹ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಮತ್ತು ವಿದ್ಯುತ್ ಕಾಯ್ದೆ ರೈತ ವಿರೋಧಿಯಾಗಿದ್ದು, ತಕ್ಷಣದಿಂದಲೇ ಅವುಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕೋಳಾಲ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಸಾವಿರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೋಳಾಲದ 22 ಗ್ರಾಮಗಳು ಸಂಕಷ್ಟ ಎದುರಿಸಲಿವೆ. ರೈತರಿಗೆ 124 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಕೊಡಬೇಕು, ಇಲ್ಲದಿದ್ದರೇ ಅಲ್ಲಿಯವರೆಗೆ ಯೋಜನೆಯ ಅನುಷ್ಠಾನವೇ ಬೇಡ ಎಂದು ಜಿಪಂ ಸದಸ್ಯ ಶಿವರಾಮಯ್ಯಆಕ್ರೋಶ ಹೊರಹಾಕಿದರು.
ತಾಲೂಕು ಸಂಚಾಲಕ ನಯಾಜ್ ಅಹಮದ್ ಮಾತನಾಡಿ, ಸರ್ಕಾರ ರೈತರಿಗೆ ಯಾವಾಗಲೂ ತೊಂದರೆ ನೀಡುತ್ತಲೇ ಬರುತ್ತಿದೆ, ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಇಲ್ಲವಾದರೆ ನಾವು ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಎಂದರು. ಪ್ರತಿಭಟನಾ ರೈತರಿಂದ ತಹಸೀಲ್ದಾರ್ ಗೋವಿಂದರಾಜು ಮನವಿ ಸ್ವೀಕರಿಸಿದರು.
ಇದು ಆರಂಭ ಅಂತ್ಯವಲ್ಲ !: ರೈತರು ಯೋಜನೆ ವಿರೋಧಿಗಳಲ್ಲ. ಅಧಿಕಾರಿಗಳು ಗುತ್ತಿಗೆದಾರರ ಪರವಾಗಿ ಕೆಲಸ ಮಾಡಬಾರದು. ನಿಯಮದಂತೆ ಅನುಕೂಲ ಮಾಡಬೇಕು. ಗಣಿಗಾರಿಕೆ ಪ್ರಾರಂಭಿಸಲು ಯಾರೂ ತಂಗನಹಳ್ಳಿಗೆ ಬರುವ ಹಾಗಿಲ್ಲ. ಹಾಗೇನಾದರು ಬಂದರೆ ಮುಂದಾಗುವ ಪರಿಣಾಮಗಳಿಗೆ ನಾವು ಹೊಣೆಗಾರರಲ್ಲ ಎಂದು ರೈತಸಂಘ ಎಚ್ಚರಿಸಿದೆ.
ಭೂಸ್ವಾಧೀನ ಪ್ರಕ್ರಿಯೆಯ ಮೂಲಕ ಸರ್ಕಾರ ಪರಿಹಾರ ನೀಡಲಿದೆ. ತಂಗನಹಳ್ಳಿ ರೈತರ 49 ಎಕರೆ ಜಮೀನು ಸರ್ಕಾರ ದಾಖಲೆಗಳಲ್ಲಿ ಭೂಸ್ವಾಧೀನ ಮಾಡಿಕೊಂಡಿದೆ, ರೈತರಿಗೆ ಯಾವುದೇ ಸಮಸ್ಯೆ ಇದ್ದರೂ ವಿಶೇಷ ಸಭೆ ಆಯೋಜಿಸಿ ಪರಿಹಾರ ಕಲ್ಪಿಸುತ್ತೇವೆ. ಕಾಲಾವಕಾಶಬೇಕು. ಗೋವಿಂದರಾಜು ತಹಸೀಲ್ದಾರ್ ಕೊರಟಗೆರೆ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ತಿಮ್ಮಲಾಪುರ ಅಭಯಾರಣ್ಯದ ಸೂಕ್ಷ್ಮ ಪರಿಸರದಲ್ಲಿ ಕಲ್ಲು ಗಣೆಗಾರಿಕೆ ನಡೆಯುತ್ತಿದೆ, ಇದು ನಿಲ್ಲಬೇಕು, ರೈತರ ಭೂಮಿ ಕಸಿದುಕೊಳ್ಳಲು ಯಾರೇ ಬಂದರೂ ಅವಕಾಶ ನೀಡುವುದಿಲ್ಲ. ಗೋವಿಂದರಾಜು ಜಿಲ್ಲಾ ಘಟದ ಅಧ್ಯಕ್ಷ