ಕರೊನಾ ಸಂಕಷ್ಟ ಹಿನ್ನೆಲೆ; ಹಾರ, ತುರಾಯಿ ಬೇಡ ಇದ್ದಲ್ಲಿಂದಲೇ ಹಾರೈಸಿ ಅದೇ ನನಗೆ ಶ್ರೀರಕ್ಷೆ ಎಂದ ಬಿಎಸ್​​ವೈ

bsy
Published on

ಬೆಂಗಳೂರು: ಕರೊನಾ ಸಂಕಷ್ಟ ಹಿನ್ನೆಲೆ, ಈ ವರ್ಷ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನಿರ್ಧರಿಸಿದ್ದಾರೆ. ನಾಳೆ ಮಾಜಿ ಸಿಎಂ ಯಡಿಯೂರಪ್ಪರ ಜನ್ಮದಿನವಾಗಿದ್ದು, ಸರಳವಾಗಿ ಆಚರಿಸುವುದಾಗಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಆತ್ಮೀಯರೇ, ಹಿತೈಷಿಗಳೇ, ಕರೊನಾ ಸಂಕಷ್ಟಗಳ ಹಿನ್ನೆಲೆ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ ಎಂದು ತಿಳಿಸಿದ್ದಾರೆ.

ನಾಳೆ ಹುಟ್ಟು ಹಬ್ಬದ ಪ್ರಯುಕ್ತ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ, ಅಭಿಮಾನಿಗಳ ಬಳಗದಿಂದ ಸಿದ್ದಗಂಗಾ ಶ್ರೀ‌ ಉಪಸ್ಥಿತಿಯಲ್ಲಿ ರೈತರಿಗೆ ಉಚಿತ ಟ್ರ್ಯಾಕ್ಟರ್​​​ಗಳನ್ನು‌ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net