ಮೂರು ವರ್ಷವಾದರೂ ಸಿಕ್ಕಿಲ್ಲ ಪರಿಹಾರ

ಸಂಡೂರು ತಾಲೂಕಿನ ಬೊಮ್ಮಾಘಟ್ಟ ಗೊಲ್ಲರಹಟ್ಟಿಯಲ್ಲಿ ಶಾಸಕಿ ಅನ್ನಪೂರ್ಣಾ ತುಕಾರಾಮ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷ ಹನುಮಂತ, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ಪಿಡಬ್ಯುಡಿ ಎಇಇ ಕೃಷ್ಣಾನಾಯ್ಕಾ ಇತರರಿದ್ದರು.
ಸಂಡೂರು ತಾಲೂಕಿನ ಬೊಮ್ಮಾಘಟ್ಟ ಗೊಲ್ಲರಹಟ್ಟಿಯಲ್ಲಿ ಶಾಸಕಿ ಅನ್ನಪೂರ್ಣಾ ತುಕಾರಾಮ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷ ಹನುಮಂತ, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ಪಿಡಬ್ಯುಡಿ ಎಇಇ ಕೃಷ್ಣಾನಾಯ್ಕಾ ಇತರರಿದ್ದರು.
Published on

ಸಂಡೂರು: ಬೊಮ್ಮಾಘಟ್ಟ ಗೊಲ್ಲರಹಟ್ಟಿಯಲ್ಲಿ ಶಾಸಕಿ ಅನ್ನಪೂರ್ಣಾ ತುಕಾರಮ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಹೊಲದ ಮಾರ್ಗದಲ್ಲಿ ಕಾಲುದಾರಿ ಇದ್ದು, ಅದನ್ನು ಬಂದ್ ಮಾಡಿದ್ದಾರೆ. ಇದರಿಂದ ಮುಂದಿನ ಹೊಲಗಳಿಗೆ ಹೋಗಲು ತೊಂದರೆಯಾಗಿದೆ. ಇದನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ರೈತ ನಾಗಪ್ಪ ಮನವಿ ಸಲ್ಲಿಸಿದರು. 2022ರಲ್ಲಿ ಸಿಡಿಲು ಬಡಿದು ಮೂವರು ಕುರಿಗಾಹಿಗಳಿಗೆ ಸೇರಿದ 33ಕುರಿಗಳು ಸತ್ತಿದ್ದವು. ಇದುವರೆಗೆ ಪರಿಹಾರ ನೀಡಿಲ್ಲ. ಪರಿಹಾರ ದೊರಕಿಸಿಕೊಡುವಂತೆ ಗ್ರಾಮಸ್ಥ ಹಳ್ಳಿ ಈರಣ್ಣ ಮನವಿ ಸಲ್ಲಿಸದರು.

ಬೊಮ್ಮಾಘಟ್ಟದ ಶಾಲೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಎಂ.ತುಂಬರಗುದ್ದಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಯರ‌್ರಯ್ಯನಹಳ್ಳಿ ಶಾಲೆಯ 13 ಕೊಠಡಿಗಳ ಪೈಕಿ 11 ಶಿಥಿಲಾವಸ್ಥೆಯಲ್ಲಿವೆ. 9 ಕೊಠಡಿಗಳು ಮಂಜೂರಾಗಿದ್ದು, ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು 8 ತಿಂಗಳಾದರೂ, ಪೂರ್ಣವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ಗ್ರಾಪಂ ಅಧ್ಯಕ್ಷರಾದ ಹನುಮಂತ, ಅಂಜಿನಮ್ಮ ಮಲ್ಲೇಶ್, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ಪಿಡಬ್ಯುಡಿ ಎಇಇ ಕೃಷ್ಣಾನಾಯ್ಕಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂದಿಹಳ್ಳಿ ಮಂಜುನಾಥ, ತಾಲೂಕು ಉಪಾಧ್ಯಕ್ಷ ಬಸವರಾಜ ಬ್ರೂಸ್ಲಿ, ಪ್ರಮುಖರಾದ ಜಯರಾಂ, ವಲಿಬಾಷಾ, ಸುರೇಶ್‌ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net