

ಶಿವಮೊಗ್ಗ: ಹೊಸನಗರದಿಂದ ನಗರ-ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ರಲ್ಲಿ ನಗರ-ಚಿಕ್ಕಪೇಟೆ ನಡುವಿನ ಸೇತುವೆ ಕುಸಿದಿರುವುದರಿಂದ ಹಾಗೂ ಶಿವಮೊಗ್ಗ-ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ವಿಹಂಗಮ ನರ್ಸರಿ ತಿರುವಿನಿಂದ ಭಾರತಿಪುರ ತಿರುವಿನವರೆಗೆ ರಸ್ತೆ ಕುಸಿದಿರುವುದರಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ಸಂಚಾರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಾರ್ಗ 1: ಶಿವಮೊಗ್ಗ- ಸಾಗರ-ಹೊನ್ನಾವರ ಮಾರ್ಗ ಅಥವಾ ಶಿವಮೊಗ್ಗ-ಹೊಸನಗರ- ಹುಲಿಕಲ್ ಘಾಟಿ- ಸಿದ್ದಾಪುರ -ಕುಂದಾಪುರ. ಮಾರ್ಗ 2: ಶಿವಮೊಗ್ಗ- ಎನ್.ಆರ್.ಪುರ- ಕೊಪ್ಪ- ಕಾರ್ಕಳ- ಮಂಗಳೂರು.