ಎಸ್ಸಿ, ಎಸ್ಟಿ ಜನರ ಕಷ್ಟಕ್ಕಿಲ್ಲ ಸ್ಪಂದನೆ

FotoJet (1)
Published on

ಕುಣಿಗಲ್​ ತಾಲೂಕು ಆಡಳಿತ ಸೌಧದ ಎದುರು ದಲಿತ ಸಂಟನೆಗಳ ಒಕ್ಕೂಟದಿಂದ ಪ್ರತಿಭಟನೆ

 ಕುಣಿಗಲ್​: ವರ್ಷದಿಂದ ಪರಿಶಿಷ್ಟ ಜಾತಿ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಕರೆದು ದಲಿತರ ಸಮಸ್ಯೆ ಬಗೆಹರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತಾಲೂಕು ಆಡಳಿತಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ದಲಿತರ ಜಮೀನು ಸೇರಿ ಅನೇಕ ಸಮಸ್ಯೆ ಪರಿಹರಿಸಲು ತಹಸೀಲ್ದಾರ್​ ಉದಾಸೀನ ತೋರಿದ್ದು, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡದವರು ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯಿಸಿದರು.

ದಲಿತ ಮುಖಂಡ ದಲಿತ್​ ನಾರಾಯಣ್​ ಮಾತನಾಡಿ, ತಾಲೂಕಿನ ಬೆಣಚಕಲ್ಲು, ತರೇದಕುಪ್ಪೆ, ಗುನ್ನಾಗರೆ, ಕೊಡವತ್ತಿ ಮಲ್ಲಾಪುರ, ಇಪ್ಪಾಡಿ, ಗೋವಿಂದಯ್ಯನಪಾಳ್ಯ ಗ್ರಾಮದ ದಲಿತರ ಜಮೀನಿನ ರಸ್ತೆಗಳನ್ನು ಉಳ್ಳವರು ಅಡ್ಡಗಟ್ಟಿ ವ್ಯವಸಾಯಕ್ಕೆ ತೊಂದರೆ ಕೊಡುತ್ತಿದ್ದರೂ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ತೋಟಿ ಇನಾಂ ಜಮೀನುಗಳನ್ನು ರಿಗ್ರಾಂಟ್​ ಮಾಡಲು 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದರೂ ಮರು ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ ದಲಿತರನ್ನು ಖಾತೆದಾರರನ್ನಾಗಿ ಮಾಡಲು ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ರ್ನಿಲಕ್ಷ$್ಯ ತೋರಿದ್ದಾರೆ ಎಂದು ಕಿಡಿಕಾರಿದರು.

ಡಿ.ಹೊಸಹಳ್ಳಿ, ಆಲ್ಕೆರೆ&ಹೊಸಹಳ್ಳಿ, ಉಜ್ಜನಿ, ನೀಲಸಂದ್ರ, ಗೋವಿಂದಯ್ಯನಪಾಳ್ಯ ಗ್ರಾಮಗಳಲ್ಲಿ ಸ್ಮಶಾನ ಒತ್ತುವರಿಯಾಗಿದ್ದರೂ ತೆರವುಗೊಳಿಸಿಲ್ಲ. ಅಮೃತೂರು ಹೋಬಳಿ ಹೊಸಕೆರೆ, ಕಸಬಾ ಹೋಬಳಿ ಮುತ್ತುಗದಹಳ್ಳಿ ಹಾಗೂ ಹುತ್ರಿದುರ್ಗ ಹೋಬಳಿ ಇಪ್ಪಾಡಿ&ಹೊಸಪಾಳ್ಯ ಮತ್ತಿತರ ಗ್ರಾಮಗಳಲ್ಲಿ ದಲಿತರಿಗೆ ನಿವೇಶನ ಹಂಚಲು ಜಮೀನು ಭೂಸ್ವಾಧಿನಪಡಿಸಿಕೊಂಡು ಐದಾರು ವರ್ಷಗಳೇ ಕಳೆದರೂ ನಿವೇಶನ ನೀಡಿಲ್ಲ. ನಿವೇಶನರಹಿತ ದಲಿತ ಕುಟುಂಬಗಳಿಗೆ ಮೀಸಲಿಟ್ಟ ನಿವೇಶನಗಳನ್ನು ಪ್ರಭಾವಿಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಚಾಕೇನಹಳ್ಳಿ, ಹೆಗ್ಗಡತಿಹಳ್ಳಿ, ಹೊಸಪುರ, ಉಜ್ಜನಿ, ಬುಕ್ಕಸಾಗರ, ಹಳೇವೂರು ಮುಂತಾದ ಗ್ರಾಮಗಳಲ್ಲಿ ದಲಿತರ ಜಮೀನುಗಳಿಗೆ ಬಲಾಢ್ಯರು ಅತಿಕ್ರಮ ಪ್ರವೇಶ ಮಾಡಿ ಉಳುಮೆಗೆ ಅಡ್ಡಿಪಡಿಸುತ್ತಿದ್ದರೂ ರಕ್ಷಣೆ ನೀಡುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ. ಅಂಬೇಡ್ಕರ್​ ಭವನ ಮತ್ತು ಸ್ಮಶಾನಕ್ಕೆ ಜಾಗ ಸೇರಿ 65ಕ್ಕೂ ಹೆಚ್ಚು ದಲಿತರ ಸಮಸ್ಯೆಗಳ ಬಗ್ಗೆ ಕಳೆದ ವರ್ಷ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸಾಲು ಸಾಲು ದೂರುಗಳನ್ನು ದಾಖಲಿಸಲಾಗಿದ್ದರೂ ಇದುವರೆಗೂ ಬಗೆಹರಿಸಿಲ್ಲ ಎಂದರು.

ಬೇಡಿಕೆ ಈಡೇರಿಕೆ ಆಗ್ರಹಿಸಿ ಗ್ರೇಡ್​ &2 ತಹಸೀಲ್ದಾರ್​ ಕೀರ್ತ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net