ಕೆಎಸ್‌ಎಲ್‌ಟಿಎ ಗುತ್ತಿಗೆ ನವೀಕರಣ ಬೇಡ Cubbon Park

ನಗರದ ಕಬ್ಬನ್ ಪಾರ್ಕ್‌ನಲ್ಲಿ ರಾಜ್ಯ ಲಾನ್ ಟೆನಿಸ್ ಅಸೋಷಿಯೇಷನ್‌ಗೆ (ಕೆಎಸ್‌ಎಲ್‌ಟಿಎ) ನೀಡಿರುವ ಜಾಗದ ಗುತ್ತಿಗೆ ಅವಧಿ ಮುಗಿದಿದ್ದು, ಅದನ್ನು ನವೀಕರಣ ಮಾಡಬಾರದು ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
Cubbon Park
Cubbon Parkಕಬ್ಬನ್ ಪಾರ್ಕ್
Published on: 

* ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಒತ್ತಾಯ

ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ನಲ್ಲಿ ರಾಜ್ಯ ಲಾನ್ ಟೆನಿಸ್ ಅಸೋಷಿಯೇಷನ್‌ಗೆ (ಕೆಎಸ್‌ಎಲ್‌ಟಿಎ) ನೀಡಿರುವ ಜಾಗದ ಗುತ್ತಿಗೆ ಅವಧಿ ಮುಗಿದಿದ್ದು, ಅದನ್ನು ನವೀಕರಣ ಮಾಡಬಾರದು ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಕೃಷ್ಣ ಬೈರೇಗೌಡ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗೆ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಈ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೆಎಸ್‌ಎಲ್‌ಟಿಎಗೆ ನೀಡಿರುವ 2.6 ಎಕರೆ ಗುತ್ತಿಗೆ ಅವಧಿ ಆ.23ಕ್ಕೆ ಮುಗಿದಿದ್ದು, ಮತ್ತೆ 25 ವರ್ಷ ಗುತ್ತಿಗೆ ನವೀಕರಣಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ನೋಂದಣಿಗೆ ಲಕ್ಷಾಂತರ ರೂ. ಶುಲ್ಕ ಸಂಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಕೇವಲ 20 ಸಾವಿರ ರೂ. ಬಾಡಿಗೆ ಪಾವತಿಸಿ ನಷ್ಟ ಉಂಟು ಮಾಡುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನವೀಕರಣ ಮಾಡಬಾರದು ಎಂದು ಕೋರಿದ್ದಾರೆ.

ಪಾರ್ಕ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕ್ಲಬ್‌ಗಳ ಕಾರ್ಯಾಚರಣೆ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಗುತ್ತಿಗೆಯ ನಿಯಮಗಳ ಉಲ್ಲಂಘನೆ, ಕ್ರೀಡಾ ಸೌಲಭ್ಯದ ಹೆಸರಿನಲ್ಲಿ ಬಾರ್ ನಡೆಸುತ್ತಿರುವುದರ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಇದರ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.