ಯಾವ ಧರ್ಮವೂ ಹಿಂಸೆ ಬಯಸಲ್ಲ

5 ಎಸ್ಕೆಪಿ 1
ಶಿಕಾರಿಪುರದಲ್ಲಿ ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಅಕ್ಬರ್ ಅಲಿ ಬಿಡುಗಡೆಗೊಳಿಸಿದರು. ಮಹಮದ್ ಗಫೂರ್, ಮಹಮದ್ ಹುಸೇನ್ ಇತರರಿದ್ದರು.
Published on

ಶಿಕಾರಿಪುರ: ಎಲ್ಲ ಧರ್ಮಗಳ ಸಾರವೂ ಒಂದೇ. ಶಾಂತಿ, ಸೌಹಾರ್ದತೆ ಸಹಬಾಳ್ವೆಯೇ ಧರ್ಮದ ಅಡಿಪಾಯವಾಗಿದೆ. ಮನಸ್ಸು ರಾಗದ್ವೇಷಗಳಿಂದ ಮುಕ್ತವಾಗಬೇಕು ಎಂದು ಉಡುಪಿಯ ಅಕ್ಬರ್ ಅಲಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಯೋಗೀಶ್ ಮಾಸ್ಟರ್ ಅವರ ‘ನನ್ನ ಅರಿವಿನಲ್ಲಿ ಪ್ರವಾದಿ’ ಪುಸ್ತಕ ಬಿಡುಗಡೆ ಮಾಡಿದ ಅವರು, ಇಸ್ಲಾಂ, ಲಿಂಗಾಯತ, ಜೈನ, ಪಾರಸಿ, ಸಿಖ್ ಹೀಗೆ ಎಲ್ಲ ಧರ್ಮಗುರುಗಳು, ಸಾಧು-ಸಂತರು, ಪ್ರವಾದಿಗಳು ಬಯಸಿದ್ದು ಲೋಕಕಲ್ಯಾಣವನ್ನೇ ಎಂದರು.
ಯೋಗೇಶ್ ಮಾಸ್ಟರ್ ಒಬ್ಬ ವಿಚಾರವಾದಿ. ಪ್ರವಾದಿಗಳ ಸಂದೇಶಗಳನ್ನು ಈ ಪುಸ್ತಕದಲ್ಲಿ ಅದ್ಭುತವಾಗಿ ದಾಖಲಿಸಿದ್ದಾರೆ. ಇದು ಅವರು ಬರೆದ 279ನೇ ಪುಸ್ತಕ. ನಾವೆಲ್ಲರೂ ಒಂದಾಗಿ ಬಾಳಬೇಕು. ನಮ್ಮ ನಮ್ಮಲ್ಲಿ ಸಂಘರ್ಷಗಳು ಸರಿಯಲ್ಲ. ಯಾವ ಧರ್ಮವೂ ಹಿಂಸೆ ಬಯಸುವುದಿಲ್ಲ. ನಾವು ಒಂದಾಗಿ ಬಾಳಿದರೆ ಸಿಗುವ ಆನಂದ ವರ್ಣಿಸಲು ಅಸಾಧ್ಯ ಎಂದು ಹೇಳಿದರು.
ಮಹಮದ್ ಪೈಗಂಬರರ ಸಂದೇಶಗಳನ್ನು ಸಾರುವ ನಿಟ್ಟಿನಲ್ಲಿ ಸೀರತ್ ಪ್ರವಚನ ಮತ್ತು ಪೈಗಂಬರ್‌ರ ಧರ್ಮಸಂದೇಶದ ಅಭಿಯಾನ ನಡೆಸಲಾಗುವುದು ಎಂದರು. ಮಹಮದ್ ಗಫೂರ್, ಮಹಮದ್ ಹುಸೇನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net