

ಶಿರಾಳಕೊಪ್ಪ: ಮಳೆಗಾಲದಲ್ಲಿ ಸರಿಯಾಗಿ ಮಳೆ ಬಾರದೇ ಬೆಳೆ ಸಂಪೂರ್ಣ ಒಣಗಿದೆ. ಇತ್ತ ಜಮೀನಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಮೆಸ್ಕಾಂ ಇಲಾಖಾಽಕಾರಿಗಳು, ಸಿಬ್ಬಂದಿ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ. ರೈತರಿಗೆ ನಿಗದಿ ಮಾಡಿದಂತೆ 7 ಗಂಟೆ ವಿದ್ಯುತ್ ನೀಡಬೇಕು ಎಂದು ರೈತರು ಮೆಸ್ಕಾಂ ಅಽಕಾರಿಗಳಿಗೆ ಒತ್ತಾಯಿಸಿದರು.
ಸೋಮವಾರ ಕರ್ನಾಟಕ ರೈತ ಸಂಘದ ಆಶ್ರಯದಲ್ಲಿ ನೂರಾರು ರೈತರು ಪಟ್ಟಣದ ಬಸ್ ನಿಲ್ದಾಣದಿಂದ ಮೆಸ್ಕಾಂ ಕಚೇರಿವರೆಗೆ ಸರ್ಕಾರ ಮತ್ತು ಮೆಸ್ಕಾಂ ಇಲಾಖೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಮೆಸ್ಕಾಂ ಕಚೇರಿಗೆ ತೆರಳಿ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲ ದಿನಗಳ ಹಿಂದಷ್ಟೇ ರೈತರು ತಕ್ಷಣ ವಿದ್ಯುತ್ ವ್ಯವಸ್ಥೆ ಸರಿಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅಽಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ÷್ಯ ತೋರಿದ್ದಾರೆ. ನಮಗೆ ವಿದ್ಯುತ್ ವ್ಯವಸ್ಥೆ ಸರಿಪಡಿಸುವವರೆಗೂ ಪ್ರತಿ ದಿನ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ 7 ತಾಸು ವಿದ್ಯುತ್ ಕೊಡುವುದಾಗಿ ಹೇಳಿ ಗ್ರಾಮಾಂತರ ಪ್ರದೇಶಕ್ಕೆ ಸರಿಯಾಗಿ ವಿದ್ಯುತ್ ಕೊಡದ ಕಾರಣ ರೈತರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ. ವೋಲ್ಟೇಜ್ ಹಾಗೂ ವಿದ್ಯುತ್ ಸರಿಯಾಗಿ ಪೂರೈಕೆಯಾಗದೆ ಟ್ರಾನ್ಸಫಾರ್ಮರ್ ಸುಟ್ಟು ಹೋಗುತ್ತಿವೆ. ಬದಲಾವಣೆ ಮಾಡಿದ ಟ್ರಾನ್ಸಫಾರ್ಮರ್ ಕೂರಿಸಿ ಮೋಟಾರ್ ಪ್ರಾರಂಭ ಮಾಡುವ ಮೊದಲೇ ಕೈಕೊಡುತ್ತಿವೆ. ತಾಲೂಕಿನಲ್ಲಿ ರಿಪೇರಿ ಕೆಲಸ ಕಳಪೆಯಾಗಿರುವುದರಿಂದ ಟ್ರಾನ್ಸಫಾರ್ಮರ್ ಚಾಲು ಆಗುವ ಮೊದಲೇ ಸುಟ್ಟುಹೋಗುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ ಮಾತನಾಡಿ, ದಿನಕ್ಕೆ 4-5 ಗಂಟೆ ವಿದ್ಯುತ್ ಕೊಡುತ್ತಿರುವ ಇಲಾಖೆ ಟ್ರನ್ಸ್ಫಾರ್ಮರ್ ಹಾಕಿದ ನಂತರ 24 ಗಂಟೆ ಚಾರ್ಜ್ ಆಗಬೇಕು ಎಂದು ರೈತರನ್ನು ಸತಾಯಿಸುವ ನೀವು ಅಽಕಾರಿಗಳಿಗೆ ಸಂಬಳ ಕೊಡುವುದು ಒಂದು ದಿನ ತಡವಾದರೆ ಆಕ್ರೋಶ ವ್ಯಕ್ತಪಡಿಸುತ್ತೀರಿ. ನಾಡಿಗೆ ಅನ್ನಕೊಡುವ ರೈತರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಕ್ಸಿಕ್ಯೂಟಿವ್ ಇಂಜಿನಿಯರ್ ಇಂಧುದರ ಮಾತನಾಡಿ, ಟ್ರಾನ್ಸಫಾರ್ಮರ್‌ಗಳನ್ನು 24 ಗಂಟೆಯೊಳಗೆ ಹಾಕಿಸಿಕೊಡಲಾಗುವುದು. ಟ್ರಾನ್ಸಫಾರ್ಮರ್ ಸಿದ್ಧ ಪಡಿಸುವ ಕಾರ್ಯ ಇನ್ನು ಕೆಲವೇ ದಿನಗಳಲ್ಲಿ ಶಿರಾಳಕೊಪ್ಪ ಎಪಿಎಂಸಿ ಕಟ್ಟಡದಲ್ಲಿ ಪ್ರಾರಂಭವಾಗಲಿದೆ. ರೈತರು ಪ್ರಾರಂಭವಾದ ತಕ್ಷಣ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು. ಏನಾದರು ವ್ಯತ್ಯಾಸವಾದಲ್ಲಿ ನನ್ನ ಜವಾಬ್ದಾರಿ ಎಂದು ಸಭೆಗೆ ತಿಳಿಸಿದರು.
7 ತಾಸು ವಿದ್ಯುತ್ ಕೊಡುವುದರ ಬಗ್ಗೆ ಮಾತನಾಡಿ, ನಮಗೆ ದಿನಕ್ಕೆ 182 ಮೆಗಾವ್ಯಾಟ್ ವಿದ್ಯುತ್ ಕೊಡಬೇಕೆಂದು ಅಲಾಟ್ ಆಗಿದೆ ಎಂದು ತಿಳಿಸಿದರು. ಆಗ ಆಕ್ರೋಶಗೊಂಡ ರೈತರು, ನಮಗೆ ಕೊಡುತ್ತಿರುವ 182 ಮೆಗಾವ್ಯಾಟ್‌ನಿಂದ ೭ತಾಸು ವಿದ್ಯುತ್ ಕೊಡಲು ಆಗುವುದಿಲ್ಲ. ಹಾಗಾಗಿ ಕನಿಷ್ಠ 250 ಮೆಗಾವ್ಯಾಟ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ದಿನಕ್ಕೆ ಹಗಲು 4 ಗಂಟೆ ರಾತ್ರಿ 3 ಗಂಟೆ ತೊಂದರೆ ಇಲ್ಲದಂತೆ ವಿದ್ಯುತ್ ಕೊಡುವುದಾಗಿ ಹೇಳಿದ ಇಂಧುದರ್, ನಾನು ಈಗಾಗಲೇ ತಾಲೂಕಿನ ಶಾಸಕರಾದ ಬಿ.ವೈ.ವಿಜಯೇಂದ್ರ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಬಳಿ ಮಾತನಾಡಿದ್ದೇನೆ. ನಮಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ರೈತ ಮುಖಂಡರಾದ ಈರಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮುಗಳಿಕೊಪ್ಪದ ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಕೊಟ್ರೇಶ್, ತಾಲೂಕು ಕಾರ್ಯದರ್ಶಿ ರಾಜು ತಾಳಗುಂದ ಇತರರಿದ್ದರು. ಮೆಸ್ಕಾಂ ಅಽಕಾರಿಗಳಾದ ಎ.ಇ.ಇ.ಪ್ರವೀಣ, ಕೇಶವ್, ಭೀಮಪ್ಪ ಇತರರಿದ್ದರು.