ಪಂಪ್‌ಸೆಟ್‌ಗಳಿಗಿಲ್ಲ ವಿದ್ಯುತ್ ಪೂರೈಕೆ

03 Hirisave 01 H.K.Raghu
ಎಚ್.ಕೆ.ರಘು
Published on

ಹಿರೀಸಾವೆ: ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ನಾಲ್ಕ ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಘು ಆರೋಪಿಸಿದರು.

ಏಳು ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ ಹಗಲಿನಲ್ಲಿ ಲೈನ್ ಟ್ರಬಲ್ ಎಂದು ಗಂಟೆಗಟ್ಟಲೇ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು ರಾತ್ರಿ ಸಮಯದಲ್ಲಿ ಕರೆಂಟ್ ಹೋದರೆ ಮತ್ತೆ ಬರುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಥಳೀಯ ಅಧಿಕಾಗಳನ್ನು ಕೇಳಿದರೆ ಮತ್ತೊಬ್ಬರ ಹೆಸರನ್ನು ಹೇಳುತ್ತಾರೆ. 9 ತಿಂಗಳಿನಿಂದ ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆ ಹಾಕಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net