ಈ ಹನ್ನೊಂದು ಊರಲ್ಲಿ 3 ದಿನಗಳಿಂದ ವಿದ್ಯುತ್ ಇಲ್ಲ!; ಕತ್ತಲಲ್ಲೇ ಕಾಲ ಕಳೆಯುತ್ತಿರುವ ಗ್ರಾಮಸ್ಥರು..

Capture
ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Published on

ಚಿಕ್ಕೋಡಿ: ಕಳೆದ ಮೂರು ದಿನಗಳಿಂದ ಈ ಊರುಗಳಲ್ಲಿ ವಿದ್ಯುತ್ ಪೂರೈಕೆ ಇರದ್ದರಿಂದ ಗ್ರಾಮಸ್ಥರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದರಿಂದಿ ಗ್ರಾಮಸ್ಥರು ಹೋರಾಟ ನಡೆಸಲಾರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ, ಖೇಮಲಾಪೂತ, ಸಿದ್ದಾಪೂರ, ಅಲಖನೂರ, ಅಳಗವಾಡಿ, ನೀಲಜಿ, ಪರಮಾನಂದವಾಡಿ, ಯಬರಟ್ಟಿ, ಚಿಕ್ಕೂಡ, ಕುರಬಗೋಡೆ, ಬಡಬ್ಯಾಕುಡ ಗ್ರಾಮಗಳಲ್ಲಿ ಮೂರು ದಿನಗಳಿಂದ ರಾತ್ರಿ ವಿದ್ಯುತ್ ಪೂರೈಕೆ ಇಲ್ಲ.

ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ಪರಿಣಾಮವಾಗಿ ಮೂರು ದಿನಗಳಿಂದ ಈ ಗ್ರಾಮಗಳಲ್ಲಿ ಕತ್ತಲೆ ಆವರಿಸಿದ್ದು, ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆ ಉಂಟಾಗಿದೆ. ವಿದ್ಯುತ್ ಇರದ್ದರಿಂದ ರೊಚ್ಚಿಗೆದ್ದಿರುವ ಈ ಹನ್ನೊಂದು ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net