

ಬೆಟ್ಟದಪುರ: ದೇವಾಲಯಗಳು ಮನಸ್ಸಿಗೆ ಶಾಂತಿ ದೊರಕಿಸಿಕೊಡುವುದರ ಜತೆಗೆ ನಂಬಿಕೆಯ ಕೇಂದ್ರ ಸ್ಥಾನಗಳಾಗಿವೆ ಎಂದು ಮಾಜಿ ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ (ಈಶ್ವರ) ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ದೇವಸ್ಥಾನ ನಿರ್ಮಾಣ, ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರು, ಭಕ್ತರು ಸದಾಕಾಲ ಒಗ್ಗಟ್ಟಿನಿಂದ ಇರಬೇಕು. ಯಾವುದೇ ಕಾರಣಕ್ಕೂ ಇಂತಹ ವಿಚಾರದಲ್ಲಿ ರಾಜಕೀಯ ಬೆರೆಸಬಾರದ ಎಂದು ಸಲಹೆ ನೀಡಿದರು.
ಈ ಹಿಂದಿನ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸುಮಾರು 12 ಲಕ್ಷ ರೂ. ಸಹಾಯಧನ ನೀಡಿದ್ದೆ. ಹಾಗಾಗಿ ಸಚಿವರೂ ಕೂಡ ಅನುದಾನವನ್ನು ನೀಡಿ, ಸಹಕರಿಸಬೇಕು ಎಂದು ಮನವಿ ಮಾಡಿದರು.
ಅತ್ತಿಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುರಳೀಧರ್, ಗ್ರಾಮದ ಮುಖಂಡರಾದ ಪುಟ್ಟರಾಜಪ್ಪ, ಪಟೇಲ್ ರವೀಂದ್ರ, ಪ್ರಕಾಶ್, ನಟೇಶ್, ಕಾಳಿಂಗೇಗೌಡ, ಮೋಹನ, ವಸಂತ, ಮಹೇಶ್, ಧನಂಜಯ್, ಅನಿಲ್, ಯೋಗೇಶ್ ಇದ್ದರು.