

ಬೆಳಗಾವಿ: ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ರಾಜಕಾರಣ ಇಲ್ಲದೇ, ಬೇಧ&ಭಾವ ಇಲ್ಲದೇ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಮನೆ ಮಗಳಾಗಿ ನನ್ನ ಸೇವೆ ಮುಂದುವರೆಸುತ್ತೇನೆ ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ೇತ್ರದ ಗ್ರಾಮಗಳ ಪ್ರಮುಖ ಬೇಡಿಕೆಗಳ ಈಡೇರಿಕೆ ಮತ್ತು ಸಮಗ್ರ ಅಭಿವೃದ್ಧಿ ಕುರಿತಂತೆ ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿ ಅಹವಾಲು ಆಲಿಸಿ ಮಾತನಾಡಿದರು.
ಕಂಗ್ರಾಳಿ ಬಿ.ಕೆ, ನಿಲಜಿ, ದೇಸೂರ, ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು, ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರಕರಿ ಮಂಡಳಿ ಅವರ ಜತೆ ಸಭೆ ನಡೆಸಿ, ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸ ಮತ್ತು ಮುಂದಿನ ದಿನಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುದೀರ್ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ, ದೇವಸ್ಥಾನಗಳ ಸಮಿತಿ ಸದಸ್ಯರ, ವಾರಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದ ಸಚಿವರು, ಸಣ್ಣ ಸಮಸ್ಯೆ ಇದ್ದರೂ ತಣ ಸ್ಪಂದಿಸುತ್ತಿದ್ದೇನೆ. ೇತ್ರದ ಜನರ ಆಶೀರ್ವಾದ ನನ್ನ ಮೇಲಿರುವುದರಿಂದ ರಾಜ್ಯದ ಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಕೂಡ ನಿಮ್ಮ ಜತೆಗೆ, ನಿಮ್ಮ ಮನೆ ಮಗಳಾಗಿ ನನ್ನ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜ್ ಕದಂ ಹಾಗೂ ೇತ್ರದ ವಿವಿಧ ಮುಖಂಡರು ಇದ್ದರು.