ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೇಡ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅಭಿಮತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

19slb1
Published on

ಸೂಲಿಬೆಲೆ: ಗ್ರಾಮಗಳಲ್ಲಿ ಅಭಿವೃದ್ಧಿ ವಿಚಾರವಾಗಿ ಯಾರೂ ರಾಜಕೀಯ ಹಸ್ತಕ್ಷೇಪ ಮಾಡದೆ ಸಹಕಾರ ನೀಡಬೇಕು ಎಂದು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.

ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಸ್ತೆಯು ಸಾಕಷ್ಟು ಹಳ್ಳಕೊಳ್ಳಗಳಿಂದ ಕೂಡಿದ್ದ ಪರಿಣಾಮ ದುರಸ್ತಿಗೆ ಚಾಲನೆ ನೀಡಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ ರಸ್ತೆ ನಿರ್ಮಿಸಬೇಕು ಎಂದರು.

ತಾಪಂ ಸದಸ್ಯ ತಾಜುನ್ನಿಸ್ಸಾ ಶಫಿವುಲ್ಲಾ ಮಾತನಾಡಿ, 8 ಲಕ್ಷ ರೂ. ತಾಪಂ ಅನುದಾನ ಮಂಜೂರಾಗಿದ್ದು, ಹೆಚ್ಚುವರಿಯಾಗಿ 2 ಲಕ್ಷವನ್ನು ತಾಪಂ ಅಧ್ಯಕ್ಷರು ಅನುದಾನ ನೀಡಲಿದ್ದು, ಒಟ್ಟು 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಿದ್ದೇವೆ ಎಂದರು.

ಗ್ರಾಪಂ ಅಧ್ಯಕ್ಷ ಮರವೆ ಕೃಷ್ಣಪ್ಪ, ಉಪಾಧ್ಯಕ್ಷ ಮುನಿಕದಿರಪ್ಪ, ಸದಸ್ಯರಾದ ರಾಘವೇಂದ್ರ, ಮಾಲಾ ರಾಜ್ ಕುಮಾರ್, ಸುಬ್ರಮಣಿ, ಕೆಇಬಿ ಮಹೇಶ್, ಫಯಾಜ್, ಉಸ್ಮಾನ್, ಮುಖಂಡರಾದ ಎಸ್.ಸಿ ರವಿ, ಪೋಸ್ಟ್ ಶ್ರೀನಿವಾಸ್ ಇದ್ದರು.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿಲ್ಲ. ಆದರೆ ರಾಜ್ಯ ರಾಜಕಾರಣದಲ್ಲಿ ಅವರನ್ನು ನಂಬಿ ಬಂದವರಿಗೆ ಅಥವಾ ಕೊಟ್ಟಮಾತಿಗೆ ತಪ್ಪದೇ ಮಾತು ಉಳಿಸಿಕೊಳ್ಳುವ ಏಕೈಕ ವ್ಯಕ್ತಿ ಬಿಎಸ್‌ವೈ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ನೀಡುವ ಎಲ್ಲ ನಿರೀಕ್ಷೆ ಇದೆ. ಯಾರು ಏನೇ ಹೇಳಿದರೂ ಅವರು ಕೇಳುವವರಲ್ಲ. ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಬೆಲೆ ಕೊಡುತ್ತಾರೆ. ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ. ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net