

ರಾವಂದೂರು: ರೈತರ ಹಿತ ಕಾಪಾಡಬೇಕಾದ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸಿ ಹಾಳು ಮಾಡಬಾರದು ಎಂದು ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಮರದೂರು ಗೇಟ್‌ನಲ್ಲಿ ನಿರ್ಮಾಣವಾದ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬಿಎಂಸಿ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಹೈನುಗಾರಿಕೆಯನ್ನು ಉಪ ಕಸುಬು ಮಾಡಿಕೊಂಡಲ್ಲಿ ಉತ್ತಮ ಬದುಕಿಗೆ ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಸ್ವಾವಲಂಬಿ ಬದುಕು ನಡೆಸಬಹುದು. ರೈತರಿಗೋಸ್ಕರ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಇದನ್ನು ಸಹಿಸಲಾಗದೆ ಬಿಜೆಪಿ ಹಾಗೂ ಜೆಡಿಎಸ್ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ಯಾರು ಕಿವಿ ಕೊಡಬಾರದು. ಹಾಲಿನ ದರ ಹೆಚ್ಚಿಸಿದ ಮೇಲೆ ಹಾಲು ಉತ್ಪಾದನೆ ಹೆಚ್ಚಾಗಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಾಳಮರಿ ಗೌಡ ಮಾತನಾಡಿ, ನಮ್ಮ ನೂತನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವರ ಕೊಡುಗೆ ಬಹಳಷ್ಟಿದೆ. ಸಚಿವರು ಸಹ ನಮ್ಮ ಸಹಕಾರ ಸಂಘದಲ್ಲಿ ಹಾಲು ಉತ್ಪಾದಕರಾಗಿದ್ದು ಹಾಗೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಮೈಮುಲ್ ನಿರ್ದೇಶಕ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಅಧ್ಯಕ್ಷರಾದ ಡಿ.ಟಿ. ಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಗಿರಿಜಾ, ಯಜಮಾನರಾದ ಜವರೇಗೌಡ , ದಶರಥ , ಮೈಮಲ್ ವ್ಯವಸ್ಥಾಪಕ ಕರಿಬಸವರಾಜ್, ಉಪ ವ್ಯವಸ್ಥಾಪಕ ಸಂತೋಷ್, ಸತೀಶ್, ಉಪೇಂದ್ರ, ನಿಶ್ಚಿತಾ, ಹೊಲದಪ್ಪ, ಉಪಾಧ್ಯಕ್ಷ ಮಾದೇವ್, ನಿರ್ದೇಶಕರಾದ ನಾಗೇಗೌಡ , ಜಯಣ್ಣೇಗೌಡ, ರಮೇಶ್ ,ಮಹೇಶ್, ಜಯಚಂದ್ರ, ತಾಲೂಕು ದಂಡಾಧಿಕಾರಿ ನಿಸರ್ಗ ಪ್ರಿಯ, ತಾಪಂ ಇಒ ಸುನೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಅಕ್ಷರ ದಾಸೋಹ ನಿರ್ದೇಶಕ ಪ್ರಶಾಂತ್, ಡಾ.ಸೋಮಯ್ಯ, ದಿನೇಶ್, ಡಿಎಸ್ ನಂದೀಶ್, ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.