ಅನುಕಂಪಕ್ಕಲ್ಲ, ಅಭಿವೃದ್ಧಿಗೆ ಮತ - ಶಾಸಕ ಶಿವಾನಂದ ಪಾಟೀಲ ಹೇಳಿಕೆ

shivand patil election campian
ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಬ್ಬಿಹಾಳ, ಕೀರಶ್ಯಾಳ, ಬೀರಲದಿನ್ನಿ, ಗುಡದಿನ್ನಿ ಗ್ರಾಮಗಳಲ್ಲಿ ಮತಯಾಚಿಸಿದ ನಂತರ ನಡೆದ ಸಭೆಯಲ್ಲಿ ಶಾಸಕ ಶಿವಾನಂದ ಪಾಟೀಲ ಮಾತನಾಡಿದರು.
Published on

ಬಸವನಬಾಗೇವಾಡಿ: ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲೂಕುಗಳಲ್ಲಿ ಮತ್ತು ಕ್ಷೇತ್ರದಲ್ಲಿ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳ ಮೇಲೆ ಜನರು ಮತ ಕೊಡುತ್ತಾರೆ ವಿನಃ ಅನುಕಂಪಕ್ಕಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಶುಕ್ರವಾರ ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಬ್ಬಿಹಾಳ, ಕೀರಶ್ಯಾಳ, ಬೀರಲದಿನ್ನಿ, ಗುಡದಿನ್ನಿ ಗ್ರಾಮಗಳಲ್ಲಿ ಮತಯಾಚಿಸಿ ನಂತರ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಈ ಕ್ಷೇತ್ರಕ್ಕೆ ಬರುವ ಮುನ್ನ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಿತ್ತು. ಈಗ ನಾನು ಈ ಕ್ಷೇತ್ರದ ಶಾಸಕನಾದ ಬಳಿಕ ಯಾವ ರೀತಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದೆ ಎಂದು ಕ್ಷೇತ್ರದಲ್ಲಿ ಒಂದು ಬಾರಿ ಸಂಚರಿಸಿದಾಗ ಮಾತ್ರ ತಿಳಿಯುತ್ತದೆ. ನಾನು ಮಾಡಿರುವ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳನ್ನು ಜನರು ಹೊಗಳುತ್ತಿದ್ದಾರೆ ಎಂದರು.

ಈ ಬಾರಿ ಚುನಾವಣೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಮೇಲೆ ನಡೆಯುತ್ತದೆ ಹೊರತು ಅನುಕಂಪದ ಮೇಲೆ ನಡೆಯುವದಿಲ್ಲ. ಯಾಕೆಂದರೆ ಕ್ಷೇತ್ರದ ಜನತೆ ಪ್ರಭುದ್ಧರಾಗಿದ್ದು. ನಿಮ್ಮ ಬಣ್ಣದ ಮಾತಿಗೆ ಮರಳಾಗುವ ಕಾಲ ಹೋಗಿ ಬಹು ದಿನಗಳಾಯಿತು. ಈಗ ಕ್ಷೇತ್ರದಲ್ಲಿ ಅಭಿವೃದ್ಧಿಯೊಂದೇ ಪ್ರಮುಖ ವಿಷಯವಾಗಿದ್ದು. ಈ ಚುನಾವಣೆ ಅಭಿವೃದ್ಧಿ ಕಾರ್ಯಗಳ ಮೇಲೆ ನಡೆಯುವುದು ನಿಶ್ಚಿತ ಎಂದರು.

ರಾಮನಗೌಡ ಪಾಟೀಲ, ಮಾನಿಂಗಯ್ಯ ಉಕಮನಾಳ, ಗೌಡಪ್ಪಗೌಡ ಪಾಟೀಲ, ಶಂಕರಯ್ಯ ಮಾಚಕನೂರ, ಬಂದೇನವಾಜ ಡೊಲಜಿ, ಚನ್ನಪ್ಪ ಮೊಸಳಿ, ವೀರಪ್ಪ ದಳವಾಯಿ, ಮುಲ್ಲಾಸಾಬ ಚಪ್ಪರಬಂದ್, ಬಸಪ್ಪ ಡೊಮ್ಮನಾಳ, ಅಲ್ಲಾಭಕ್ಷ ನದಾಫ್, ಹನುಮಂತ ಉಕ್ಕಲಿ, ಮುದುಕಪ್ಪ ಡೊಮನಾಳ, ಶರಣಪ್ಪ ಕುಂಬಾರ, ಎಂ.ಜಿ. ಗುಡದಿನ್ನಿ, ಎಂ.ಎನ್. ಸುತ್ತಾರ, ಸದಾಂ ಚಪ್ಪರಬಂದ್, ರಾಜು ಮಾದರ, ಬಸವಪ್ಪ ಮಾದರ, ದ್ಯಾವಪ್ಪ ಮಾದರ, ಮತಲಪ್ಪ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net