

ಆನೇಕಲ್ : ತಾಲೂಕಿನ ವಿವಿಧಡೆ ಅಕ್ರಮ ಬಡಾವಣೆಗಳಿಗೆ ಪರವಾನಗಿ ನೀಡುತ್ತಿರುವುದನ್ನ ಖಂಡಿಸಿ ಪ್ರಜಾ ವಿಮೋಚನಾ ಚಳವಳಿ ತಾಲೂಕು ಸಮಿತಿಯಿಂದ ಹುಲಿಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರಜಾ ವಿಮೋಚನಾ ಚಳವಳಿ ಸಂಟನೆಯ ರಾಜ್ಯ ಟಕದ ಅಧ್ಯ ಆನೇಕಲ್ ಕೃಷ್ಣಪ್ಪ ಮಾತನಾಡಿ, ಅಕ್ರಮ ಬಡಾವಣೆಗಳಿಗೆ ಅನುಮತಿ ನೀಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸರ್ಕಾರ ಮತ್ತು ಜಿಲ್ಲಾಧಿಕಾರಿ ಕ್ರಮವಹಿಸಬೇಕು. ಹಸಿರು ವಲಯಗಳಲ್ಲಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಅಧಿಕಾರಿಗಳು ಶಾಮಿಲಾಗಿದ್ದು, ಸರ್ಕಾರ ಸೂಕ್ತ ನಿರ್ದೇಶನ ನೀಡುವ ಮೂಲಕ ಹಸಿರು ಭೂಮಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಆನೇಕಲ್ ತಾಲೂಕು ಜಿಗಣಿ ಹೋಬಳಿ ಹುಲಿಮಂಗಲ ಗ್ರಾಮದ ಸರ್ವೇ ನಂಬರ್ 155, 156 ರಲ್ಲಿ 300 ಎಕರೆ ಸರ್ಕಾರಿ ಭೂಮಿಯಾಗಿದ್ದು, ಈ ಪೈಕಿ 50 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ನಿವೇಶನಗಳನ್ನು ನೀಡಬೇಕು ಮತ್ತು ಎರಡು ಎಕರೆ ಜಮೀನನ್ನು ಅಂಬೇಡ್ಕರ್ ಭವನ ನಿರ್ಮಿಸಲು ಕಾಯ್ದಿರಿಸಬೇಕು. ಇದರಿಂದಾಗಿ ಕೋಟ್ಯಂತರ ರೂ. ವೆಚ್ಚದ ಸರ್ಕಾರಿ ಭೂಮಿ ಉಳಿಸಿದಂತಾಗುತ್ತದೆ ಎಂದರು.
ಪ್ರಜಾ ವಿಮೋಚನ ಚಳವಳಿ ಸಂಟನೆಯ ಸಂತೋಷ್ ಮಾತನಾಡಿ, ಹುಲಿಮಂಗಲ ವಾಪಸಂದ್ರ, ಎಸ್ ಬಿಂಗಿಪುರ ಸೇರಿ ತಾಲೂಕಿನ ವಿವಿಧಡೆ ಅಕ್ರಮ ಬಡಾವಣೆಗಳ ನಿರ್ಮಾಣ ಹೆಚ್ಚಾಗಿದೆ. ಹಾಗಾಗಿ ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಜಾಗೃತಿ ಮೂಡಿಸುವ ಸಲುವಾಗಿ ಹುಲಿಮಂಗಲ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದರು. ಬೆಂಗಳೂರು ದಣ ತಾಲೂಕು ಉಪಾಧ್ಯ ಅಶೋಕ್, ಮುಖಂಡರಾದ ವೆಂಕಟೇಶ್, ಪರಶುರಾಮ್, ನಾಗಪ್ಪ, ಸಂತೋಷ್, ರಮೇಶ್, ಮಂಜು, ರಾಮಯ್ಯ ಇದ್ದರು.