ಪಾರ್ಕಿಂಗ್ ಶುಲ್ಕ ಇಲ್ಲವೇ ಇಲ್ಲ!

h5-Parking Durgadbail 3
Published on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ವಿವಿಧೆಡೆ ವಾಹನಗಳ ನಿಲುಗಡೆ ಶುಲ್ಕ ಸಂಗ್ರಹಕ್ಕೆ ಮಹಾನಗರ ಪಾಲಿಕೆ ನೀಡಿದ್ದ ಟೆಂಡರ್​ಗಳ ಅವಧಿ ಮುಗಿದಿದೆ. ಹೀಗಾಗಿ ಸದ್ಯಕ್ಕೆ ಯಾರೂ ರ್ಪಾಂಗ್ ಶುಲ್ಕ ನೀಡುವ ಅಗತ್ಯವಿಲ್ಲ. ಯಾರಾದರೂ ಶುಲ್ಕ ಕೊಡಿ ಎನ್ನುತ್ತ ಚೀಟಿ ಕೊಡಲು ಮುಂದೆ ಬಂದರೆ ಅದು ಅಪರಾಧ... ಪಾ ರ್ಕಿಂ ಗ್

ಹೌದು, ಅವಳಿ ನಗರದಲ್ಲಿ ರ್ಪಾಂಗ್​ಗೆ ಹೊಸ ಟೆಂಡರ್​ಅನ್ನು ಇನ್ನೂ ಕರೆಯಬೇಕಿದೆ. ದಾಜಿಬಾನ ಪೇಟೆಯಲ್ಲಿ ಮಾತ್ರ ಅಂದಾಜು 20 ವಾಹನಗಳು ನಿಲುಗಡೆಗೊಳ್ಳುವ ಪ್ರದೇಶದಲ್ಲಿ 91,500 ರೂ. ಮೊತ್ತದ ಟೆಂಡರ್ ಅಂತಿಮಗೊಂಡಿದೆ. ಆದರೆ, ಈ ಗುತ್ತಿಗೆದಾರರಿಗೆ ಮಹಾನಗರ ಪಾಲಿಕೆಯಿಂದ ಇನ್ನೂ ವರ್ಕ್​ಆರ್ಡರ್ ನೀಡಿಲ್ಲ. ಈ ತಿಂಗಳ ಕೊನೆಯಲ್ಲಿ ಆದೇಶ ನೀಡುವ ನೀರಿಕ್ಷೆ ಇದೆ. ಹಾಗಾಗಿ ಅಲ್ಲಿಯೂ ಸದ್ಯಕ್ಕೆ ರ್ಪಾಂಗ್ ಶುಲ್ಕ ವಸೂಲಿ ಜಾರಿಯಲ್ಲಿಲ್ಲ.

ಹುಬ್ಬಳ್ಳಿಯ 8 ಹಾಗೂ ಧಾರವಾಡದ 2 ಪ್ರದೇಶಗಳಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಮಹಾನಗರ ಪಾಲಿಕೆ ಚಾಲನೆ ನೀಡಿದೆ. ಈ ಹಿಂದೆಯೂ ಟೆಂಡರ್ ಕರೆಯಲಾಗಿತ್ತು. ಆದರೆ ಪಾಲಿಕೆಯ ದರ ಹೊಂದದ ಕಾರಣ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೂ ಪಾಲ್ಗೊಂಡಿರಲಿಲ್ಲ.

ರ್ಪಾಂಗ್ ಶುಲ್ಕದ ಟೆಂಡರ್​ನಿಂದಲೇ ಪಾಲಿಕೆಗೆ ವಾರ್ಷಿಕ 80 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಆದಾಯವಿದೆ.

ಧಾರವಾಡದಲ್ಲಿ ಸುಮಾರು 1 ವರ್ಷದಿಂದ ರ್ಪಾಂಗ್ ಶುಲ್ಕಕ್ಕಾಗಿ ಟೆಂಡರ್ ನೀಡಿಲ್ಲ. ಹುಬ್ಬಳ್ಳಿ ದುರ್ಗದಬೈಲ್ ಹಾಗೂ ಬೆಳಗಾವಿ ಗಲ್ಲಿಯಲ್ಲಿ ಈ ಮೊದಲು ಕರೆದಿದ್ದ 7.91 ಲಕ್ಷ ರೂ. ಮೊತ್ತದ ಟೆಂಡರ್ ಅವಧಿ ಹಾಗೂ ಕೊಪ್ಪಿಕರ ರಸ್ತೆಯಲ್ಲಿ ಕರೆದಿದ್ದ 8.20 ಲಕ್ಷ ರೂ. ಟೆಂಡರ್ ಅವಧಿ ಕಳೆದ ತಾ. 2ರಂದು ಪೂರ್ಣಗೊಂಡಿದೆ. ಶುಲ್ಕ ವಸೂಲಿ ಕರಾರನ್ನು ವಿಸ್ತರಣೆ ಮಾಡಿಲ್ಲ. ಹೀಗಾಗಿ, ಶುಲ್ಕ ಕೇಳಲು ಹಿಂದಿನ ಗುತ್ತಿಗೆದಾರರು ಸೇರಿ ಯಾರಿಗೂ ಅಧಿಕಾರ ಇಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ದುರ್ಗದಬೈಲ್​ನಲ್ಲಿ 10 ರೂ.:

ಟೆಂಡರ್ ಅವಧಿ ಪೂರ್ಣಗೊಂಡಿದ್ದರೂ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆ ಹಾಗೂ ದುರ್ಗದಬೈಲ್​ನಲ್ಲಿ ಬೈಕ್ ಹಾಗೂ ಕಾರುಗಳಿಂದ ಅನಧಿಕೃತವಾಗಿ ರ್ಪಾಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ದುರ್ಗದಬೈಲ್​ನಲ್ಲಂತೂ 5 ರೂ.ಗಳ ರ್ಪಾಂಗ್ ರಸೀದಿಯನ್ನೂ ನೀಡದೇ, ಬೈಕ್ ಸವಾರರಿಂದ 10 ರೂ.ಗಳನ್ನು ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿತ್ತು. ಈ ಕುರಿತು ಪ್ರಶ್ನಿಸಿದರೆ ಹೆಚ್ಚಿನ ಶುಲ್ಕ ವಸೂಲಿಗೆ ಪಾಲಿಕೆಯಿಂದ ಅನುಮತಿ ಪಡೆದಿದ್ದೇವೆ. ಮಾಜಿ ಮೇಯರ್ ಒಬ್ಬರಿಗೆ ಇಲ್ಲಿಯ ಟೆಂಡರ್ ಆಗಿದೆ. 10 ರೂ. ಕೊಡಲೇಬೇಕು ಎಂದು ಸ್ಥಳದಲ್ಲಿದ್ದ ವಸೂಲಿ ಸಿಬ್ಬಂದಿ ದಬಾಯಿಸುತ್ತಿದ್ದರು. 10 ರೂ.ಗಾಗಿ ಜಗಳವಾಡುವುದೇಕೆ ಎಂದು ಗೊಣಗುತ್ತಲೇ ಹೆಚ್ಚಿನವರು ಹಣ ತೆತ್ತು ಹೋಗುತ್ತಿದ್ದರು.

ಫಲಕವೂ ಅನಧಿಕೃತ

ಗುತ್ತಿಗೆ ಅವಧಿ ಮುಗಿದಿದ್ದರೂ ರ್ಪಾಂಗ್ ಶುಲ್ಕದ ಫಲಕ ಮಾತ್ರ ತೆರವುಗೊಳಿಸಿಲ್ಲ. ಅದೇ ಫಲಕ ತೋರಿಸಿ ಕೆಲವರು ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ರ್ಪಾಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಸದ್ಯಕ್ಕೆ ಶುಲ್ಕದ ಫಲಕವೇ ಅನಧಿಕೃತವಾಗಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕಿದೆ.

ಅವಳಿ ನಗರದಲ್ಲಿನ ರ್ಪಾಂಗ್ ಟೆಂಡರ್​ಗಳ ಅವಧಿ ಪೂರ್ಣಗೊಂಡಿದೆ. ಹೊಸ ಟೆಂಡರ್ ಕರೆಯಬೇಕಿದೆ. ಹುಬ್ಬಳ್ಳಿ ದುರ್ಗದಬೈಲ್​ನ ಟೆಂಡರ್ ಅವಧಿ ವಿಸ್ತರಿಸುವಂತೆ ಗುತ್ತಿಗೆದಾರರು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಮುಂದಿನ ಆದೇಶದವರೆಗೆ ಯಾರೂ ಶುಲ್ಕ ವಸೂಲಿ ಮಾಡುವಂತಿಲ್ಲ.

| ಡಾ. ಸುರೇಶ ಇಟ್ನಾಳಮಹಾನಗರ ಪಾಲಿಕೆ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net