ಜಾತಿಗಣತಿಯಿಂದ ಯಾರೂ ದೂರ ಉಳಿಯದಿರಿ

dvd shivaraj
ಶಿವರಾಜ
Published on

ದೇವದುರ್ಗ: ಒಳಮೀಸಲಾತಿ ಜಾರಿಗೆ ಸಮರ್ಪಕ ಅಂಕಿಅಂಶ ಪಡೆಯಲು ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಶಿವರಾಜ ಅಕ್ಕರಕಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಮೇ 5ರಿಂದ ಸಮೀಕ್ಷೆ ಆರಂಭವಾಗಿದ್ದು, ಸಮುದಾಯದ ಜನರು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು. ಯಾರೂ ಜಾತಿಗಣತಿಯಿಂದ ಹೊರಗುಳಿಯಬಾರದು ಎಂದರು. ಮುಖಂಡರಾದ ಅರ್ಜುನ್ ಕೊಪ್ಪರ, ಶರಣಪ್ಪ ಪರ್ತಾಪುರ, ರಮೇಶ್, ತಿಮ್ಮಪ್ಪ, ಗುರುರಾಜ್ ಕೋಟೆ, ಅಶೋಕ ಇದ್ದರು.

ಛಲವಾದಿ ಬಲಗೈ ಎಂದು ಬರೆಸಿ: ಛಲವಾದಿ ಸಮಾಜದ ಮುಖಂಡರು ಜಾತಿಗಣತಿಯಿಂದ ದೂರ ಉಳಿಯದೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಮಹಾಂತೇಶ ಭವಾನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಉಪಜಾತಿ, ಮನೆತನದ ಹೆಸರು ಬರೆಸದೆ ಜಾತಿ ಕಾಲಂನಲ್ಲಿ ಛಲವಾದಿ ಬಲಗೈ ಎಂದೇ ಬರೆಸಬೇಕು ಎಂದರು. ಮುಖಂಡರಾದ ಮಲ್ಲೇಶಪ್ಪ ಹುನಗುಂದಬಾಡ್, ನರಸಪ್ಪ ವಕೀಲ, ಚಂದ್ರಶೇಖರ್ ಛಲವಾದಿ, ಅಂಬರೀಷ್ ಭವಾನಿ, ಮಾನಪ್ಪ, ಆಂಜನೇಯ ಸುಂಕೇಶ್ವರಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net