

ಚಿಕ್ಕಬಳ್ಳಾಪುರ: ರಾಜಕೀಯದಲ್ಲಿ ಯಾರು ಸನ್ಯಾಸಿಗಳಾಗಿರಲ್ಲ. ಸದಾ ಅಧಿಕಾರಕ್ಕಾಗಿ ಏನೇನೋ ಮಾಡುತ್ತಿರುತ್ತಾರೆ. ಇದು ಸಾಮಾನ್ಯ ವಿಷಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಡಿನ್ನಾರ್ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗುಡಿಬಂಡೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಗಳು, ಶಾಸಕರು ಪ್ರತ್ಯೇಕ ಭೋಜನಕೂಟಗಳನ್ನು ನಡೆಸುತ್ತಿದ್ದಾರೆ ಎಂಬುದೇ ದೊಡ್ಡ ಚರ್ಚೆಯ ವಿಷಯವಾಗಿದೆ. ಇದರ ಬದಲು ಜನರ ಸಮಸ್ಯೆಗಳು, ನಿರೀೆಯ ಪರಿಹಾರ ಕೆಲಸಗಳು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ರಾಜಕೀಯದಲ್ಲಿ ಅಧಿಕಾರ ಇಲ್ಲದೇ ಇರುವುದಕ್ಕೆ ಯಾರೂ ಬಯಸಲ್ಲ. ಸನ್ಯಾಸಿಗಳಾಗಿಯೇ ಇರಲ್ಲ ಎನ್ನುವ ಮೂಲಕ ಕಸರತನ್ನು ಪರೋಕ್ಷ$ವಾಗಿ ಸಮರ್ಥಿಸಿಕೊಂಡರು.
*ಎಚ್ಡಿಕೆಗೆ ಬಿಜೆಪಿ ವಂಚನೆ
ಬಿಜೆಪಿಯಿಂದಾಗುತ್ತಿರುವ ವಂಚನೆಯ ಹತಾಶ ಭಾವನೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಶೇ.60 ರಷ್ಟು ಕಮೀಷನ್ ದಂಧೆಯು ಆರೋಪವು ಸಹ ಹಿಟ್ ಅಂಡ್ ರನ್ ಆಗಿದೆಯಷ್ಟೇ ಎಂದು ಕಂದಾಯ ಸಚಿವರು ವ್ಯಂಗ್ಯವಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಸರಿಯಾಗಿ ಬಳಸಿಕೊಂಡಿತು. ಆದರೆ, ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಕೈ ಕೊಟ್ಟಿತು. ದಳದ ಭದ್ರಕೋಟೆಯಲ್ಲಿ ಹಿಂದೆ ಪಡೆದಷ್ಟು ಮತಗಳು ಮಾತ್ರ ಸಿಕ್ಕಿವೆ. ಹಾಗಾದರೆ ಬಿಜೆಪಿಯ ಮತಗಳು ಎಲ್ಲಿ ಹೋದವು ಎಂತಲೂ ಪ್ರಶ್ನಿಸಿದರು.