ಕರಗ ಉತ್ಸವಕ್ಕೆ ಅನುದಾನ, ಆತಂಕ ಬೇಕಿಲ್ಲ: ಡಿಕೆಶಿ|Karaga

karaga mahotsava bng
Published on

ಬೆಂಗಳೂರು: ಕರಗ ಉತ್ಸವಕ್ಕೆ ಅನುದಾನ ಕೊಡುವ ಬಗ್ಗೆ ಯಾರು ಆತಂಕಪಡಬೇಕಾಗಿಲ್ಲ(No one needs to worry about funding the Karaga Festival). ಅದಕ್ಕಾಗಿ ಬಜೆಟ್‌ನಲ್ಲೇ ಅನುದಾನ ಇಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಗಕ್ಕೆ ಸರ್ಕಾರದಿಂದ ಅನುದಾನ ಕೊಡುವುದಕ್ಕೆ ಒಂದು ಪದ್ದತಿ ಇದೆ. ಯಾರ‌್ಯಾರೋ ಕೈಗೆ ದುಡ್ಡು ಕೊಡಲು ಅಗಲ್ಲ. ಡಿಸಿ ಯಾರಿಗೆ ಕೊಡಬೇಕೋ ಅವರಿಗೆ ಕೊಡುತ್ತಾರೆ ಎಂದರು.

ಬೆಂಗಳೂರು ಕರಗ ಭಾರತ ದೇಶದ ಐತಿಹಾಸಿಕ ಉತ್ಸವ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕರಗ ಉತ್ಸವದಲ್ಲಿ ಭಾಗಿಯಾಗಿದ್ದೆ. ಕರಗ ಭಾವಕೈತೆಯ ದೊಡ್ಡ ಸಂಕೇತವಾಗಿದೆ. ಕರಗ ದರ್ಗಾಕ್ಕೂ ಹೋಗುತ್ತದೆ. ಯಾರೊ ಒಬ್ಬರು ಸರ್ಕಾರ ಟೀಕೆ ಮಾಡುವುದಲ್ಲ. ಅದರ ಅವಶ್ಯಕತೆಯೂ ಇಲ್ಲ.

ದೇವಸ್ಥಾನ, ಧರ್ಮದಲ್ಲಿ ರಾಜಕೀಯ ಮಾಡೋದು ನೀಚತನ. ಅದನ್ನು ಯಾರೂ ಮಾಡಬಾರದು ಎಂದು ತಿಳಿಸಿದರು.

ಸಚಿವ ರಾಮಲಿಂಗಾರೆಡ್ಡಿ ಅವರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅನುದಾನ ಸೇರಿದಂತೆ ಎಲ್ಲ ಸಮಸ್ಯೆ ಬಗೆಹರಿಸಿದ್ದಾರೆ. ಡಿಸಿ, ಎಸಿ, ಪೊಲೀಸರು ಆಚರಣೆಯನ್ನು ಚೆನ್ನಾಗಿ ಮಾಡಿದ್ದಾರೆ. ದೇವಸ್ಥಾನದ ಸಮಿತಿ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಕರಗ ಉತ್ಸವದ ಆಚರಣೆಯನ್ನು ಉಳಿಸಿಕೊಂಡು ಬೆಂಗಳೂರಿನ ಗೌರವ ಹೆಚ್ಚಳ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net