

ವೇಮಗಲ್ : ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿಚುನಾವಣೆ ಲಿತಾಂಶ ಕಂಡು ಕಾಂಗ್ರೆಸ್ ಕಾರ್ಯಕರ್ತರು ನಿರಾಸೆ ಪಡಬೇಕಿಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತ ಪಡೆದಿದ್ದೇವೆ. ಆದ್ದರಿಂದ ಸೋಲಿಗೆ ಯಾರನ್ನು ಹೊಣೆ ವಾಡುವುದು ಬೇಡ. ಸೋಲು ಮುಂದಿನ ಗೆಲುವಿಗೆ ಮುನ್ನುಡಿಯಾಗಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.
ಕೋಲಾರ ತಾಲೂಕಿನ ವೇಮಗಲ್‌ನಲ್ಲಿರುವ ವಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರ ಮನೆಯಲ್ಲಿ ಭಾನುವಾರ ಪಟ್ಟಣ ಪಂಚಾಯಿತಿಚುನಾವಣೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ವಾತನಾಡಿದರು.
ಚುನಾವಣೆಯ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಷ್ಟು ಅಭಿವೃದ್ಧಿ ಕೆಲಸಗಳನ್ನೂ ವಾಡುತ್ತೇವೆ. ಕಾಂಗ್ರೆಸ್ ಸೋತಿದೆ, ಅಭಿವೃದ್ಧಿ ವಾಡಲ್ಲ ಎಂದು ಕಾಂಗ್ರೆಸ್ ವಿರೋಧಿಗಳು ಅಪಪ್ರಚಾರ ವಾಡಿದ್ದಾರೆ. ಅದಕ್ಕೆ ಯಾರೂ ಕಿವಿ ಕೊಡಬೇಡಿ. ಸೋತವರಿಗೂ ಹಾಗೂ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಬೇರೆ ಬೇರೆ ಅವಕಾಶ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುವಾರ್ ವಾತನಾಡಿ, ಚುನಾವಣೆಯಲ್ಲಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಲಾಗಿತ್ತು. ಜತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಕೈ ಹಿಡಿಯಲಿವೆ ಎಂದು ಭಾವಿಸಲಾಗಿತ್ತು. ಆದರೂ ಸೋಲು ಎದುರಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದು, ಏಕಾಂಗಿಯಾಗಿದ್ದ ಕಾಂಗ್ರೆಸ್‌ಗೆ ಸೋಲಾಗಿದೆ ಎಂದರು.
ವಾಜಿ ಸಭಾಪತಿ ವಿ.ಆರ್ ಸುದರ್ಶನ್ ವಾತನಾಡಿ, ಜನರ ಸೇವೆ ವಾಡಲು ಅಧಿಕಾರವೊಂದೇ ವಾನದಂಡವಲ್ಲ, ಕಾಂಗ್ರೆಸ್ ಚುನಾವಣೆಯ ಫಲಿತಾಂಶದಲ್ಲಿ ಸೋತಿರಬಹುದು. ಆದರೆ, ಈ ಸೋಲು ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಸೋಲಿಗೆ ಕಾರಣ ಏನು ಎಂಬುದನ್ನು ಆತ್ಮಾವಲೋಕನ ಮಾಡಿ ಸರಿಪಡಿಸಿಕೊಳ್ಳಬೇಕು ಎಂದರು.
ನಾಗನಾಳ ಸೋಮಣ್ಣ, ಬ್ಲಾಕ್ ಅಧ್ಯಕ್ಷ ವಿ.ಬಿ.ಉದಯಶಂಕರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಮುಖಂಡರಾದ ಎಸ್. ಮಂಜುನಾಥ್, ಕುರುಬರಹಳ್ಳಿ ಕುವಾರ್, ಮುನಿರಾಜು,ಬಿ. ನಾಗರಾಜ್, ಎಂ. ರಮೇಶ್, ಸುರೇಶ್, ಪಟ್ಟಣ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರಾದ ಅಂಜಲಿ ಪ್ರಕಾಶ್, ಗಂಗಪ್ಪ, ಮಂಜುಳಾ ತಾಸುಫ್ ಖಾನ್, ದೀಪ, ಶಶಿಕಲಾ ಸೇರಿದಂತೆ ಪರಾಜಿತ ಅಭ್ಯರ್ಥಿಗಳು ಇದ್ದರು.