ಜಗತ್ತಿನಲ್ಲಿ ಯಾರೂ ಶಾಶ್ವತವಲ್ಲ

18 MADIVALA 1
Published on

ಮಡಿವಾಳ: ಐಶ್ವರ್ಯ ಹಾಗೂ ಅಧಿಕಾರ ಇದ್ದಾಗ ಜನರ ನೆನಪಿನಲ್ಲಿ ಉಳಿಯುವಂತ ಕಾರ್ಯಗಳು ಮಾಡಿದರೆ ಅದು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ನಾಗಲಾಪುರ ಸಂಸ್ಥಾನ ಮಠ ಶ್ರೀ ತೇಜೇಶಲಿಂಗ ಸ್ವಾಮೀಜಿ ಹೇಳೀದರು.

ಮಾಲೂರು ತಾಲೂಕು ಚೊಕ್ಕಂಡಹಳ್ಳಿಯಲ್ಲಿ ಶ್ರೀ ಗುರುಮಣ್ಣೇಶ್ವರಸ್ವಾಮಿ ಭಕ್ತ ಮಂಡಳಿಯಿಂದ ನಿರ್ಮಾಣವಾದ ಶ್ರೀ ಗುರು ಸದನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಯಾರೂ ಶಾಶ್ವತವಲ್ಲ. ನಮ್ಮ ಜೀವಿತಾವಧಿಯಲ್ಲಿ ಮಾಡಿರುವ ಸೇವೆ ಹಾಗೂ ಕೆಲಸ ಕಾರ್ಯಗಳೇ ಶಾಶ್ವತ. ಮನಸಿಲ್ಲದಿದ್ದರೆ ಐಶ್ವರ್ಯ ಅಧಿಕಾರ ಪ್ರಯೋಜನವಿಲ್ಲ ಎಂದರು.

ಯಶೋಧಮ್ಮ ಸಿ.ಎಂ.ಮಂಜುನಾಥ ಅವರು ಉಚಿತವಾಗಿ ನಿವೇಶನ ನೀಡಿದ್ದು, ಭಕ್ತ ಮಂಡಳಿ, ಟ್ರಸ್ಟ್​, ದಾನಿಗಳಿಂದ ಕಟ್ಟಡ ನಿಮಾರ್ಣವಾಗಿದೆ. ಇದರಿಂದ ಬರುವ ಆದಾಯವನ್ನು ಕಂತೇಪುರ ಮಠದ ಗುರುಮಣ್ಣೇಶ್ವರಸ್ವಾಮಿ ಅಭಿವೃದ್ಧಿಗೆ ಬಳಿಸಿಕೊಳ್ಳಲಾಗುವುದು ಎಂದರು.

ಎಎಸ್​ವಿಎನ್​ವಿ ಸಂಘದ ಅಧ್ಯಕ್ಷ ಎಸ್​.ಪ್ರಕಾಶ್​ ಮಾತನಾಡಿ, ಚೊಕ್ಕಂಡಹಳ್ಳಿಯಲ್ಲಿ ನಿಮಾರ್ಣವಾಗಿರುವ ಗುರುಸದನ ದಾನಿಗಳು ಹಾಗೂ ಭಕ್ತ ಮಂಡಳಿಯಿಂದ ನಿಮಾರ್ಣ ಮಾಡಿರುವುದು ಸಂತಸದ ಸಂಗತಿ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋದಲ್ಲಿ ಪ್ರಗತಿ ಸಾಧ್ಯ, ಏನಾದರೂ ಮಾಡಬೇಕು ಎನ್ನುವವರು ಪ್ರಯತ್ನವೇ ಮುಖ್ಯವಾಗಿದೆ ಎಂದರು.

ನಿರ್ದೇಶಕರಾದ ಜಾನಕಿ ಮಹೇಶ್​, ನಟರಾಜ್​, ಚಂದ್ರಶೇಖರ್​, ಡಾ.ಎಸ್​.ಪ್ರಭಾಕರ್​, ಕುಮಾರಸ್ವಾಮಿ, ಬಿ.ಸತೀಶ್​, ನಾಮಕರಣ ಸದಸ್ಯರಾದ ಬಿ.ವಿಜಯಕುಮಾರ್​, ಆಹ್ವಾನಿತರಾದ ಸಿ.ಎಸ್​.ಮಂಜುನಾಥ್​, ಎಂ.ಮುಕೇಶ್​, ಮಾಲೂರು ಎಎಸ್​ವಿಎನ್​ವಿ ಸಂಘದ ನಿದೇರ್ಶಕ ನಂಜುಂಡಪ್ಪ, ಹಿರಿಯ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ಕುಮಾರ್​, ಸಂದೇಶ್​, ಸಂಗಮೇಶ್​, ತಾಲೂಕು ಅಧ್ಯಕ್ಷ ಜೆ.ಎಂ.ಪ್ರೇಮ್​ ಕುಮಾರ್​, ಸಿ.ಎನ್​.ಧನರಾಜ್​, ಸಿಎಲ್​ಆರ್​ ನಾಗರಾಜ್​, ಬಾಲರಾಜ್​, ಚಿಕ್ಕಮಹೇಶ್​, ಪುಟ್ಟರಾಜ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net