

ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಹೊಸ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿ ಬೆಂಗಳೂರಿಗರಿಗೆ ಕೊಡುಗೆ ನೀಡಬೇಕು ಎಂದುಕೊಂಡಿದ್ದ ಬಿಎಂಆರ್ಸಿ ಆಸೆಗೆ ರೈಲ್ವೆ ಸುರಕ್ಷತಾ ಆಯುಕ್ತರು ತಣ್ಣೀರೆರಚಿದ್ದಾರೆ.
ಕರೊನಾ ಸೋಂಕಿನ ನಡುವೆಯೂ ಕಾಮಗಾರಿಗೆ ವೇಗ ನೀಡಿದ್ದ, ಬಿಎಂಆರ್ಸಿಎಲ್ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ಮಾರ್ಗದ ಕಾಮಗಾರಿ ಮತ್ತು ಪರೀೆ ರ್ಪೂಣಗೊಳಿಸಿದೆ. ಉಳಿದ ಎಲ್ಲ ಪ್ರಕ್ರಿಯೆಗಳನ್ನು ರ್ಪೂಣಗೊಳಿಸಿ ನವೆಂಬರ್ 1ರಿಂದ ವಾಣಿಜ್ಯ ಕಾರ್ಯಾಚರಣೆ ನಡೆಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಮಾರ್ಗದ ಸುರಕ್ಷತೆ ಪರೀೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಈವರೆಗೆ ಬಂದಿಲ್ಲ. ಹೀಗಾಗಿ, 6.4 ಕಿ.ಮೀ. ಉದ್ದದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದು ಇನ್ನಷ್ಟು ವಿಳಂಬವಾಗುವಂತಾಗಿದೆ.
ತಿಂಗಳಾಂತ್ಯಕ್ಕೆ ಪರೀಕ್ಷೆ : ಯಲಚೇನಹಳ್ಳಿ & ಅಂಜನಾಪುರ ಮಾರ್ಗದಲ್ಲಿ ಆಗಸ್ಟ್ 27ರಿಂದ ಪರೀಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಥರ್ಡ್ ರೈಲ್ ಹಳಿಗಳಿಗೆ ವಿದ್ಯುತ್ ಪ್ರವಹಿಸುವುದು, ನಿಲ್ದಾಣಗಳು ಮತ್ತು ಮಾರ್ಗದಲ್ಲಿನ ಸಿಗ್ನಲಿಂಗ್ ವ್ಯವಸ್ಥೆ, ಮಾರ್ಗದಲ್ಲಿ ಸಿಗುವ ತಿರುವುಗಳಲ್ಲಿ ರೈಲು ಸಂಚರಿಸುವ ವೇಗದ ಪರೀೆಗಳನ್ನು ನಡೆಸಲಾಗಿದೆ. ಜತೆಗೆ 80 ಕಿ.ಮೀ. ವೇಗದಲ್ಲೂ ರೈಲು ಸಂಚರಿಸಿ ಪರೀೆ ಮಾಡಲಾಗಿದೆ.
ಇಷ್ಟೆಲ್ಲ ಆದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತೆ ಬಗ್ಗೆ ಪರೀೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಬೇಕಿದೆ. ಅದಕ್ಕಾಗಿ ಬಿಎಂಆರ್ಸಿಎಲ್ ಕಳೆದ 15 ದಿನಗಳ ಹಿಂದೆಯೇ ಆಯುಕ್ತರಿಗೆ ಪತ್ರ ಬರೆದು, ಪರೀೆ ನಡೆಸುವಂತೆ ಮನವಿ ಮಾಡಿತ್ತು. ಅದರಂತೆ ಅ. 15ಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಬರಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಈವರೆಗೆ ಆಯುಕ್ತರಿಂದ ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ. ಈ ತಿಂಗಳಾಂತ್ಯಕ್ಕೆ ಆಯುಕ್ತರು ಪರೀೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ನವೆಂಬರ್ ಎರಡನೇ ವಾರ: ರೈಲು ಮಾರ್ಗ ಪರೀೆಯಲ್ಲಾಗುತ್ತಿರುವ ವಿಳಂವು ವಾಣಿಜ್ಯ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ನ. 1ಕ್ಕೆ ಆರಂಭಿಸಬೇಕೆಂದಿದ್ದ ವಾಣಿಜ್ಯ ಕಾರ್ಯಾಚರಣೆಯನ್ನು ಮುಂದೂಡಲಾಗಿದೆ. ಅದರಂತೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ದೊರೆತರೆ ನವೆಂಬರ್ ಎರಡನೇ ವಾರದಿಂದ ಕಾರ್ಯಾಚರಣೆ ಆರಂಭಿಸಲಾಗುತ್ತದೆ.
10 ನಿಮಿಷದ ಪ್ರಯಾಣ: ಪರೀಕ್ಷಾರ್ಥ ಸಂಚಾರದ ವೇಳೆ ಮಾರ್ಗ ಕ್ರಮಿಸುವ ಅವಧಿಯನ್ನು ಲೆಕ್ಕ ಹಾಕಲಾಗಿದೆ. ಅದರಂತೆ 6.4 ಕಿ.ಮೀ. ಉದ್ದದ ಮಾರ್ಗವನ್ನು ಮೆಟ್ರೋ ರೈಲಿನ ಮೂಲಕ 10 ನಿಮಿಷದಲ್ಲಿ ತೆರಳಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ ನಿಲ್ದಾಣದವರೆಗೆ ಪ್ರಯಾಣಿಸಲು 20 ರೂ. ಟಿಕೆಟ್ ದರ ನಿಗದಿ ಮಾಡುವ ಕುರಿತು ಚಚಿರ್ಸಲಾಗಿದೆ.