ಉಪಜಾತಿ ಕಾಲಂನ ಅವಶ್ಯಕತೆ ಇಲ್ಲ

22 lxr 4 panchamasali)
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜದವರು ಬರೆಸಬೇಕಾದ ಮಾಹಿತಿ ಪತ್ರಿಕೆಗಳನ್ನು ಲಕ್ಷ್ಮೇಶ್ವರದಲ್ಲಿ ಮಂಜುನಾಥ ಮಾಗಡಿ ಹಾಗೂ ಸಮಾಜದವರು ಬಿಡುಗಡೆಗೊಳಿಸಿದರು. ಚೆನ್ನಪ್ಪ ಕರಿಯತ್ತಿನ, ಫಕೀರೇಶ ಕವಲೂರ ಇತರರು ಇದ್ದರು.
Published on

ಲಕ್ಷ್ಮೇಶ್ವರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಪಂಚಮಸಾಲಿ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು ಹಾಗೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಹಾಗೂ ಕ್ರಮ ಸಂಖ್ಯೆಯನ್ನು ಎ-868 ಎಂದು ಬರೆಸುವಂತೆ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.

ಪಟ್ಟಣದ ಸಂಘದ ಕಚೇರಿಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಮಾಹಿತಿ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಿರಿಯರು ಜಾತಿಯನ್ನು ಲಿಂಗಾಯತ ಪಂಚಮಸಾಲಿ ಎಂದೇ ಬರೆಸಿದ್ದಾರೆ. ಹೀಗಾಗಿ ಈಗಲೂ ಜಾತಿ ಕಾಲಂನಲ್ಲಿ ಅದನ್ನೇ ಬರೆಸಬೇಕು. ಮತ್ತು ಉಪಜಾತಿ ಕಾಲಂನ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸಮಾಜದ ಡಿ.ಬಿ. ಬಳಿಗಾರ ಹಾಗೂ ಚಂಬಣ್ಣ ಬಾಳಿಕಾಯಿ ಮಾತನಾಡಿದರು. ಚೆನ್ನಪ್ಪ ಕರಿಯತ್ತಿನ, ಫಕೀರೇಶ ಕವಲೂರ, ಬಸಣ್ಣ ಉಮಚಗಿ, ಮಲ್ಲಿಕಾರ್ಜುನ ನೀರಲಗಿ, ಸಾಲ್ಮನಿ, ನೀಲಪ್ಪ ಕರ್ಜೆಕಣ್ಣವರ, ಚಂದ್ರು ಮಾಗಡಿ, ಫಕೀರೇಶ ಕವಲೂರ, ಮಂಜುನಾಥ ಗೌರಿ, ಮಲ್ಲಿಕಾರ್ಜುನ ನೀರಾಲೋಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net