ಪುರಸಭೆ ಚುನಾವಣೆಯಲ್ಲಿ ಎಂಪಿಆರ್ ಪಾತ್ರವಿಲ್ಲ

vote
Published on

ಹೊನ್ನಾಳಿ: ಪಟ್ಟಣ ಪಂಚಾಯಿತಿ 2016ರ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ನಿಗದಿಸಿದ್ದ ಅಭ್ಯರ್ಥಿ ವಿರುದ್ಧ ಇಬ್ಬರು ಬಿಜೆಪಿ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿ ಬಿಜೆಪಿ ಅಧಿಕಾರಕ್ಕ ಕಳೆದುಕೊಳ್ಳವಂತೆ ಮಾಡಿ ಪಕ್ಷದಿಂದ ಸಸ್ಪೆಂಡ್ ಆಗಿದ್ದ ಎ.ಬಿ. ಹನುಮಂತಪ್ಪಗೆ ಎಂ.ಪಿ. ರೇಣುಕಾಚಾರ್ಯರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಪುರಸಭಾ ಮಾಜಿ ಅಧ್ಯಕ್ಷ ಕೆ.ವಿ. ಶ್ರೀಧರ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2016ರಲ್ಲಿ ಜಿ.ಎಂ. ಸಿದ್ದೇಶ್ವರ್ ಸಂಸದರಾಗಿದ್ದರು. ಆಗ ಇದೇ ಎ.ಬಿ. ಹನುಮಂತಪ್ಪ ಇಬ್ಬರು ಬಿಜೆಪಿ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿದ್ದರಿಂದ ಅಂದು ಮತದಾನಕ್ಕೆ ಬಂದಿದ್ದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಮಾಡಿದ್ದ ಹನುಮಂತಪ್ಪ ಇಂದು ನಮ್ಮ ನಾಯಕರ ಬಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ದಿನಾಂಕದ ಹಿಂದಿನ ದಿನವೇ (ಸೆ.5) ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನಿವಾಸದಲ್ಲಿ ಸೇರಿ ಚರ್ಚಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ಮಾತನಾಡಿದ್ದೇವು. ಆದರೆ, ನಮ್ಮ ಪಕ್ಷದ ಇಬ್ಬರು ಸದಸ್ಯರು ಏಕಾಏಕಿ ಚುನಾವಣೆಗೆ ಗೈರಾದರು. ಅಲ್ಲಿಗೆ ನಮಗೆ ಸೋಲಿನ ಭೀತಿ ಅರಿವಾಗಿದ್ದರಿಂದ ನಾವು ಚುನಾವಣೆಯಿಂದ ಹಿಂದೆ ಸರಿದೆವು. ಈ ಚುನಾವಣೆಯಲ್ಲಿ ನಮ್ಮ ನಾಯಕರ ಪಾತ್ರ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಪಟ್ಟಣದಲ್ಲಿ ಯಾವ ವಾರ್ಡ್‌ಗೆ ಯಾರು ಸದಸ್ಯರು ಎಂಬುದು ಗೊತ್ತಿಲ್ಲದ ಹನುಮಂತಪ್ಪ ನಮಗೆ ನೈತಿಕತೆ ಪಾಠ ಹೇಳುತ್ತಿದ್ದಾರೆ. ಬಿಜೆಪಿ ಪುರಸಭಾ ಸದಸ್ಯರು ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವರ ವಿರುದ್ಧ ಹಾಗೂ ಎಲ್ಲ್ಲ ಪುರಸಭಾ ಸದಸ್ಯರ ವಿರುದ್ಧ ಆರೋಪಿಸಿದ್ದು, ಈ ಕೂಡಲೇ ಕೂಡಲೆ ಎಲ್ಲರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪುರಸಭಾ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಕೆ.ವಿ. ಶ್ರೀಧರ್, ರಂಗನಾಥ್, ಬಾಬು ಹೋಬಳದಾರ್,ನಗರದ ಮುಖಂಡರಾದ ಪೇಟೆ ಪ್ರಶಾಂತ್, ಮಹೇಶ್ ಹುಡೇದ್ ಮಾತನಾಡಿದರು. ಮಂಜುನಾಥ್ ಇಂಚರ ಸತೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net