

ಸೊರಬ: ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು ಸಾಕಷ್ಟಿದ್ದು ಯಾವುದೇ ಸರ್ಕಾರದ ಬಂದರೂ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯದಿರುವುದು ದುರ್ದೈವದ ಸಂಗತಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ರಂಗಮಂದಿರದಲ್ಲಿ ಶನಿವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಕರ ಕಾರ್ಯಾಗಾರ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಶಾಲಾ ಕರ್ತವ್ಯದ ಅವಧಿಯಲ್ಲಿ ಶಿಕ್ಷಕರು ಅನವಶ್ಯಕವಾಗಿ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕಚೇರಿಗಳಿಗೆ ಅಲೆಯುವುದು ಸಲ್ಲದು. ಸರ್ಕಾರ ನೀಡುವ ವೇತನಕ್ಕೆ ಬದ್ಧರಾಗಿ ನೌಕರರು ಕರ್ತವ್ಯ ನಿರ್ವಹಿಸಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು. ಶೈಕ್ಷಣಿಕ ಕ್ಷೇತ್ರದಿಂದ ಮಾತ್ರವೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯವಿದೆ. ಅನೇಕ ಸಾವಲುಗಳಲ್ಲಿ ನಡುವೆಯೂ ಕರ್ತವ್ಯಕ್ಕೆ ದ್ರೋಹವೆಸಗದೆ, ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡಬೇಕಿದೆ ಎಂದರು.
ಶಿಕ್ಷಣ ಮತ್ತು ಶಿಕ್ಷಕ ಪ್ರಸ್ತುತ ಸವಾಲುಗಳ ಕುರಿತು ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಪತಿ ಹಳಗುಂದ ಉಪನ್ಯಾಸ ನೀಡಿ, ಶಿಕ್ಷಕನಿಗೆ ಸಾಮಾಜಕಿ ಪ್ರಜ್ಞೆ ಇರಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಜಗತ್ತನ್ನು ಗೆಲ್ಲುವಂತೆ ತಯಾರು ಮಾಡದೆ ಮನೆಯೊಳಗಿನ ಜಗಲಿಯ ಜನನಿಯನ್ನು ಗೆಲ್ಲುವಂತಹ ಪಾಠ ಹೇಳಿದಾಗ ಸಮಾಜದ ಸುಧಾಾರಣೆಗೆ ಪ್ರೇರಣೆ ದೊರಯುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಕಾಶ್ ಮಡ್ಲೂರ್ ಮಾತನಾಡಿದರು. ಅಮೆರಿಕನ್ ಇಂಡಿಯಾ ಫೌಂಡೇಷನ್ ರಾಜ್ಯ ಸಂಚಾಲಕ ಸುಧಾಕರ ಭಂಡಾರಿ ಮತ್ತು ತಂಡದವರನ್ನು, ಕ್ಷೇತ್ರ ಶಿಕ್ಷಣಾಧಿಕಚೇರಿಯ ವ್ಯವಸ್ಥಾಪಕ ಕೆ.ವಿ. ವಿನಾಯಕ, ತುಡಿನೀರು ಸರ್ಕಾರಿ ಹಿರೀಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರುದ್ರೇಶ್, ಬಿಇಒ ಕಚೇರಿ ಸಿಬ್ಬಂದಿ ಸನ್ಮಾನಿಸಲಾಯಿತು. ಸುನಂದಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ಶಿವಕುಮಾರ್ ವಹಿಸಿದ್ದರು. ಡಿಡಿಪಿಐ ಪರಮೇಶ್ವರಪ್ಪ, ಡಯಟ್ ಉಪನಿರ್ದೇಶಕ ಬಸವರಾಜಪ್ಪ, ಇಒ ಪ್ರದೀಪ್‌ಕುಮಾರ್, ಕೇತ್ರ ಶಿಕ್ಷಣಾಧಿಕಾರಿ ಟಿ.ಎಂ.ಸತ್ಯನಾರಾಯಣ, ರುದ್ರಪ್ಪ, ಸುಮತಿ, ದಯಾನಂದ ಕಲ್ಲೇರ, ಮನೋಹರ, ಲಿಂಗರಾಜ ಒಡೆಯರ್, ಕುಮಾರ್, ಚಂದ್ರಾನಾಯ್ಕ, ಸತ್ಯನಾರಾಯಣ, ಚಂದ್ಯಾನಾಯ್ಕಾ, ಕೃಷ್ಣಾನಂದ, ಶಶಿಕಲಾ, ಶಿವಕುಮಾರ್ ಇತರರಿದ್ದರು.