ನಗರ ಹೃದಯಭಾಗದ ಪಿ.ಬಿ. ರಸ್ತೆ ಕತ್ತಲು

23 Dwd 2
Published on

ಧಾರವಾಡ: ನಗರದ ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್‌ವರೆಗಿನ ಪಿ.ಬಿ. ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ದೀಪಗಳು ಬೆಳಗುತ್ತಿಲ್ಲ. ಕೆಲ ವರ್ಷಗಳ ಹಿಂದೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು, ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್‌ವರೆಗೆ ಡಬಲ್ ರೋಡ್ ಮಾಡಲಾಗಿದ್ದು, ಮಧ್ಯೆ ಡಿವೈಡರ್ ಇದೆ.

ರಸ್ತೆಯುದ್ದಕ್ಕೂ ವಿದ್ಯುತ್ ಕಂಬ ಅಳವಡಿಸಲಾಗಿದೆ. ಆದರೆ, ಕೆಲ ದಿನಗಳಿಂದ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೆಲ ದಿನಗಳ ಹಿಂದೆ ರಾತ್ರಿ ಓಲ್ಡ್ ಎಸ್‌ಪಿ ವೃತ್ತದಲ್ಲಿ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದ. ಈ ರಸ್ತೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತು ಪಾಲಿಕೆಗೆ ದೂರು ನೀಡಿದರೆ ನಮಗೆ ಸಂಬAಽಸಿದ್ದಲ್ಲ ಎನ್ನುತ್ತಿದ್ದಾರೆ. ರಾಷ್ಟಿçÃಯ ಹೆದ್ದಾರಿ ಪ್ರಾಽಕಾರಕ್ಕೆ ದೂರು ಕೊಟ್ಟರೆ ಸ್ಪಂದಿಸುತ್ತಿಲ್ಲ.

ಸAಬAಧಪಟ್ಟವರು ಇತ್ತ ಗಮನ ಹರಿಸಿ ವಿದ್ಯುತ್ ದೀಪಗಳನ್ನು ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿ ಮುನೀರಅಹ್ಮದ್ ಅ. ಕಿತ್ತೂರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net