ಹೊಸ ಮದ್ಯದ ಅಂಗಡಿಗೆ ಪರವಾನಗಿ ಬೇಡ

02-10-Shiva-2
ಹೊಸದಾಗಿ ಸಾವಿರ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಗಾಂೀಜಿ ಪುತ್ಥಳಿ ಮುಂದೆ ಮದ್ಯ ನಿಷೇಧ ಆಂದೋಲನದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸಂಘಟನೆ ಪದಾಕಾರಿಗಳಾದ ವಿದ್ಯಾ ಪಾಟೀಲ್, ಮೋಕ್ಷಮ್ಮ, ವಿರುಪಮ್ಮ, ಯಲ್ಲಮ್ಮ, ಗದ್ದೆಮ್ಮ, ಚಂದ್ರಕಲಾ, ಅನುರಾಧ, ಉಮಾಕ್ಷಿ, ನೀಲಮ್ಮ ಇದ್ದರು.
Published on

ರಾಯಚೂರು: ರಾಜ್ಯ ಸರ್ಕಾರ ಹೊಸದಾಗಿ ಒಂದು ಸಾವಿರ ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ನೀಡಲು ಮುಂದಾಗಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯಿರುವ ಗಾಂೀಜಿ ಪುತ್ಥಳಿ ಬಳಿ ಮದ್ಯ ನಿಷೇಧ ಆಂದೋಲನದಿಂದ ಭಾನುವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು.
ಗಾಂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜುಗೆ ಸೋಮವಾರ ಮನವಿ ಸಲ್ಲಿಸಿ, ಸರ್ಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂೀಜಿ ಹೇಳಿದ್ದು, ಅವರ ಆಶಯದಂತೆ ಮದ್ಯ ನಿಷೇಧಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಸಂಘಟನೆಯಿಂದ ಕಳೆದ 7 ವರ್ಷಗಳಿಂದ ಮದ್ಯ ನಿಷೇಧಕ್ಕಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆದೇಶವನ್ನು ನೀಡಿದೆ. ಜತೆಗೆ ಸಂಘಟನೆಯಿಂದ ಎಲ್ಲೆಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಹೆಸರು, ವಿಳಾಸವನ್ನು ನೀಡಿದ್ದರೂ ಪೊಲೀಸ್ ಮತ್ತು ಅಬಕಾರಿ ಇಲಾಖೆ ಕ್ರಮಕೈಗೊಂಡಿಲ್ಲ.
ಈಗಾಗಲೇ ಮದ್ಯದ ವ್ಯಸನಕ್ಕೆ ಬಲಿಯಾಗಿ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಪ್ರತಿನಿತ್ಯ ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಸಾವಿರಾರು ಜನರು ಅಪಘಾತದಲ್ಲಿ ಸಾಯುತ್ತಿದ್ದಾರೆ. ಆದರೆ ಸರ್ಕಾರ ಹೊಸದಾಗಿ ಮದ್ಯದ ಅಂಗಡಿ ತೆರೆಯಲು ಮುಂದಾಗಿರುವುದು ಖಂಡನೀಯ.
ಮೂರು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದು ಹಾಗೂ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಮುಂದಾಗಿರುವುದು ಮದ್ಯ ಸೇವನೆಗೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗಲಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಪದಾಕಾರಿಗಳಾದ ವಿದ್ಯಾ ಪಾಟೀಲ್, ಮೋಕ್ಷಮ್ಮ, ವಿರುಪಮ್ಮ, ಯಲ್ಲಮ್ಮ, ಗದ್ದೆಮ್ಮ, ಚಂದ್ರಕಲಾ, ಅನುರಾಧ, ಉಮಾಕ್ಷಿ, ನೀಲಮ್ಮ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net