ರೈತರಿಗಾಗಿ ಭೂ ಸ್ವಾಧಿನ ಇಲ್ಲ

30 08 2025_BGR_RURAL-PAGE_3
ನೆಲಮಂಗಲದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಿಂದ ಆಯೋಜಿಸಿದ್ದ ಕೆಸಿಸಿ ಬೆಳೆ ಸಾಲ, ಸ್ವಸಹಾಯ ಸಂಗಳ ಗುಂಪು ಸಾಲ ಹಾಗೂ ಮಾಧ್ಯಮಾವಧಿ ಸಾಲಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ಎಂಎಲ್​ಸಿ ಎಸ್​.ರವಿ, ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ನಿರ್ದೇಶಕ ಪಟ್ಟಭಿರಾಮಯ್ಯ, ಮಾಜಿ ಅಧ್ಯಕ್ಷ ಎಂಬಿಟಿ.ರಾಮಕೃಷ್ಣಪ್ಪ ಇದ್ದರು.
Published on

ನೆಲಮಂಗಲ : ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವ ಬಿಡಿಸಿಸಿ ಬ್ಯಾಂಕ್​ ಕಾರ್ಯ ಶ್ಲಾನೀಯ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು. ನಗರದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಿಂದ ಆಯೋಜಿಸಿದ್ದ ಕೆಸಿಸಿ ಬೆಳೆ ಸಾಲ, ಸ್ವಸಹಾಯ ಸಂಗಳ ಗುಂಪು ಸಾಲ ಹಾಗೂ ಮಧ್ಯಮಾವಧಿ ಸಾಲಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿಗೆ ಹೊಂದಿಕೊಂಡಿರುವ ೇತ್ರದಲ್ಲಿ ಯಾವುದೇ ರೀತಿಯಲ್ಲಿ ಭೂಸ್ವಾಧಿನ ಆಗಬಾರದು. ಭೂಮಿಯನ್ನೇ ನಂಬಿ ಬಹುತೇಕ ರೈತರು ಜೀವನ ನಡೆಸುತ್ತಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದು ಭೂಸ್ವಾಧಿನ ಕಾರ್ಯ ಕೈ ಬಿಡಿಸಲಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಬಿಡಿಸಿಸಿ ಬ್ಯಾಂಕ್​ ಸಹಕಾರ ನೀಡುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಎಂಎಲ್ಸಿ ಎಸ್​.ರವಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್​ನಿಂದ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಸಾಲ ಕೊಡಲಾಗುತ್ತಿದೆ. ಸಾಲ ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಇನ್ನೂ ಹಚ್ಚಿನ ಸಾಲ ನೀಡಲಾಗುವುದು. 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಲಾಗುವುದು. ಎರಡು ಹಸು ಖರೀದಿ ಮಾಡಲು 1.80ಲಕ್ಷ ರೂ.ಸಾಲ ನೀಡಲಾಗುವುದು. ಬ್ಯಾಂಕ್​ನಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಗೂಗಲ್​ ಪೇ, ಫೋನ್​ ಪೇ ಸೌಲಭ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಅಧ್ಯಕ್ಷ ವಿಜಯ್​ ದೇವ್​ ಮಾತನಾಡಿ, ಬಿಡಿಸಿಸಿ ಬ್ಯಾಂಕ್​ನಿಂದ 150 ಕೋಟಿ ರೂ.ಗೂ ಅಧಿಕ ವಿವಿಧ ರೀತಿಯ ಸಾಲ ವಿತರಣೆ ಮಾಡಲಾಗಿದೆ. ಜತೆಗೆ ತಾಲೂಕಿನಲ್ಲಿ 11.35ಕೋಟಿಗೂ ಹೆಚ್ಚು ಕೆಸಿಸಿ ಬೆಳೆ ಸಾಲ, ಸ್ವಸಹಾಯ ಗುಂಪು ಸಾಲ ಹಾಗೂ ಮಧ್ಯಮಾವಧಿ ಸಾಲ ನೀಡಲಾಗುತ್ತಿದೆ. ರೈತರು ಸಾಲ ಮನ್ನಾ ಆಗುತ್ತದೆ ಎನ್ನುವ ಮನೋಭಾವ ಬಿಟ್ಟು ಕೆಸಿಸಿ ಬೆಳೆ ಸಾಲ ಪಡೆದು ಸಾಲ ತೀರಿಸಬೇಕು ಎಂದರು.

ಉಪನಿಬಂಧಕ ಚಂದ್ರಶೇಖರ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಸದಸ್ಯ ಸಿ.ಪ್ರದಿಪ್​, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ಟಿಎಪಿಸಿಎಂಎಸ್​ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ವೀರಮಾರೇಗೌಡ, ನಾಗಭೂಷಣ್​, ತಾಲೂಕಿನ ವಿವಿಧ ವಿಎಸ್ಸೆಸ್ಸೆನ್​ಗಳ ಅಧ್ಯಕ್ಷರಾದ ಭಾಗ್ಯಮ್ಮರಮೇಶ್​, ರತ್ನಪ್ರಕಾಶ್​, ಪುಟ್ಟರಾಜು, ಪರಮೇಶ್ವರ್​, ರಮೇಶ್​, ನಾಗರಾಜು, ಹುಚ್ಚಣ್ಣ, ಪ್ರಭುದೇವ್​, ಹನುಮಂತೇಗೌಡ, ಶಂಕರ್​, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಹನುಮಂತರಾಜು, ಮಹೇಶ್​ಕುಮಾರ್​, ಉಮೇಶ್​, ಮುಖಂಡ ಸಿ.ಎಂ.ಗೌಡ, ಚಿಕ್ಕಣ್ಣ, ಜಯರಾಮ್​, ಟಿ.ನಾಗರಾಜು, ರವಿಕುಮಾರ್​ ಇತರರು ಇದ್ದರು.

ಅಪಪ್ರಚಾರಕ್ಕೆ ಕಿವಿಕೊಡಬೇಡಿ :  ಕ್ಷೇತ್ರದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಇತ್ತೀಚೆಗೆ ವಿರೋಧ ಪಕ್ಷದವರು ಅಭಿವೃದ್ಧಿ ಹಾಗೂ ವೃಷಭಾವತಿ ಯೋಜನೆ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಸೇವೆ ಮಾಡಲು ಅವಕಾಶ ನೀಡಿದ್ದ ಕ್ಷೇತ್ರದ ಜನತೆಗೆ ವಿಷ ನೀಡುವ ಕೆಲಸ ಎಂದಿಗೂ ಮಾಡುವುದಿಲ್ಲ. ಅಂತರ್ಜಾಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದ್ದು, ರೈತರು ವಿರೋಧ ಪಕ್ಷದ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದು ಶಾಸಕ ಎನ್​. ಶ್ರೀನಿವಾಸ್​ ಹೇಳಿದರು.

ಭೂಮಿ ಕಳೆದುಕೊಳ್ಳ ಬೇಡಿ : ತಾಲೂಕಿನಾದ್ಯಂತ ಬಹುತೇಕ ರೈತರು ಜಮೀನು ನಂಬಿಕೊಂಡು ಒಕ್ಕಲುತನ ಮಾಡುತ್ತಿದ್ದಾರೆ. ಆದರೆ ಕೆಲಮಧ್ಯವರ್ತಿಗಳಿಂದ ಭೂಮಿ ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ. ರೈತರು ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಿ ಭೂಮಿ ಕಳೆದುಕೊಳ್ಳಬೇಡಿ ಎಂದು ಶಾಸಕ ಎನ್​.ಶ್ರೀನಿವಾಸ್​ ರೈತರಿಗೆ ಕಿವಿಮಾತು ಹೇಳಿದರು.

ಮೈಕ್ರೋ ಪೈನಾನ್ಸ್​ನಿಂದ ತೊಂದರೆ : ಮಹಿಳೆಯರ ಹಾಗೂ ರೈತರ ಆರ್ಥಿಕ ಸಬಲಿಕರಣಕ್ಕೆ ಡಿಸಿಸಿ ಬ್ಯಾಂಕ್​ನ ಕೇಂದ್ರ ಕಚೇರಿಯಿಂದ ವಿತರಣೆ ಮಾಡುತ್ತಿದ್ದ ಬಡ್ಡಿರಹಿತ ಸಾಲ ಸೌಲಭ್ಯ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮೈಕ್ರೊ ಫೈನಾನ್ಸ್​ ಬಡವರಿಗೆ ಸಾಲ ನೀಡುವ ನೆಪದಲ್ಲಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಮೈಕ್ರೋ ಪೈನಾನ್ಸ್​ನಲ್ಲಿ ಬಡ್ಡಿ ತಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net