

ರಾಯಚೂರು: ಕನ್ನಡದ ನಾಡು, ನುಡಿಯ ಪ್ರಾತಿನಿಕ ಸಂಸ್ಥೆ ಎನಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರನ್ನು ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಆಹ್ವಾನಿಸದೆ ಸಭೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಅಧ್ಯಕ್ಷತೆಯಲ್ಲಿ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಕನ್ನಡಪರ ಸಂಘಟನೆ ಸೇರಿದಂತೆ ಹಲವು ಸಂಘಸಂಸ್ಥೆಗಳ ಪದಾಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದ್ದರೂ ಕಸಾಪ ಪದಾಕಾರಿಗಳಿಗೆ ಮಾತ್ರ ಆಹ್ವಾನ ನೀಡಿರಲಿಲ್ಲ.
ಈ ಬಗ್ಗೆ ಡಾ.ಕೆ.ಆರ್.ದುರಗೇಶರ ಜತೆಗೆ ಕಸಾಪ ಪದಾಕಾರಿಗಳು ಮತನಾಡಿದಾಗ ಕಿರಿಯ ಅಕಾರಿಗಳು ಲೋಪ ಎಸಗಿದ್ದಾರೆ ಎನ್ನುವ ಮಾತುಗಳನ್ನಾಡಿದ್ದಾರೆ. ಹಲವಾರು ಜಯಂತಿಗಳ ಆಚರಣೆ ಕುರಿತಂತೆ ಪೂರ್ವಭಾವಿ ಸಭೆ ನಡೆಸುವಾಗಲು ಜಿಲ್ಲಾಡಳಿತ ಸಂಬಂಸಿದವರಿಗೆ ಆಹ್ವಾನ ನೀಡದೆ ಕಾಟಾಚಾರದ ಸಭೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯೋತ್ಸವ ನಿಮಿತ್ತ ನ.1ರಂದು ಧ್ವಜಾರೋಹಣ ಕಾರ್ಯಕ್ರಮ, ಪಥ ಸಂಚಲನ ನಡೆಸಲಾಗುತ್ತಿದದು, ಜಿಲ್ಲೆಯ ಉತ್ತಮ ಸಾಹಿತಿಗಳಿಗೆ ಎಡೆದೊರೆ ಸಾಧನಾ ಪುರಸ್ಕಾರ ನೀಡಲಾಗುವುದು. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಡಾ.ಕೆ.ಆರ್.ದುರಗೇಶ ಅಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಶಿಕ್ಷಣಾಕಾರಿ ಆರ್.ಇಂದಿರಾ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಕೋಲ್ಕಾರ, ಆಯುಷ್ ಇಲಾಖೆ ಜಿಲ್ಲಾ ಅಕಾರಿ ಡಾ.ಶಂಕರಗೌಡ ಪಾಟೀಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ ನಾಯಕ, ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಉಪಸ್ಥಿತರಿದ್ದರು.