

ಶೃಂಗೇರಿ: ಮೆಣಸೆ ಗ್ರಾಪಂನಲ್ಲಿ ಏಳು ಗ್ರಾಮಗಳಿವೆ. 6200 ಜನಸಂಖ್ಯೆ ಹೊಂದಿದ್ದು, 185 ಕುಟುಂಬ ವಸತಿರಹಿತವಾಗಿವೆ ಎಂದು ಪಿಡಿಒ ನಾಗಭೂಷಣ್ ತಿಳಿಸಿದರು.
ಗ್ರಾಪಂನಲ್ಲಿ ಶುಕ್ರವಾರ 2022-23ರ ಜಮಾಬಂದಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಕಾಮಗಾರಿಗೆ ಹಾಗೂ ಜನರ ಮೂಲ ಸೌಕರ್ಯಗಳಿಗೆ ಬಳಸಲಾಗಿದೆ. ಯಾವುದೇ ಕಾಮಗಾರಿ ಗುಣಮಟ್ಟದ ಕುರಿತು ಸಾರ್ವಜನಿಕರು ಮಾಹಿತಿ ನೀಡಬಹುದು ಎಂದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ನಟರಾಜ್ ಮಾತನಾಡಿ, ಸರ್ಕಾರದ ಅನುದಾನದಲ್ಲಿ ಶೇ.25 ಎಸ್ಸಿ, ಎಸ್ಟಿಗೆ ಮೀಸಲಿಟ್ಟು ಆ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಸದಸ್ಯರಾದ ಸುಷ್ಮಾ, ರಾಜು, ಶಾಮಣ್ಣ, ಯೋಗೀಶ್, ತ್ರಿಮೂರ್ತಿ, ಮಂಜುನಾಥ್, ಅಶೋಕ್ ಇದ್ದರು.