ಭಯ, ಆತಂಕ ಬೇಡ; ಮುನ್ನೆಚ್ಚರಿಕೆ ವಹಿಸಿ

26 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನರು ಒಗ್ಗಟ್ಟಾಗಿ ಕೈ ಜೋಡಿಸಿದರೆ ಡೆಂಘೆ ರೋಗ ಬೇಗ ನಿಯಂತ್ರಣಕ್ಕೆ ಬರಲಿದೆ. ಜ್ವರ ಬಂದರೆ ವೈದ್ಯರನ್ನು ಸಂಪಕಿರ್ಸಬೇಕು. ರೋಗ ಪ್ರತಿ ಮಳೆಗಾಲದಲ್ಲಿ ಅನೈರ್ಮಲ್ಯ ಸ್ಥಳಗಳಲ್ಲಿ, ಅನಗತ್ಯ ನೀರು ಸಂಗ್ರಹಣ ಸ್ಥಳಗಳಲ್ಲಿ ಕಾಣಿಸುತ್ತದೆ. ರೋಗ ಬಗ್ಗೆ ಭಯ, ಆತಂಕ ಬೇಡ. ತಿಳಿವಳಿಕೆ, ಮುಂಜಾಗೃತೆ ವಹಿಸುವುದೇ ಇದಕ್ಕೆ ಮದ್ದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ತಾಲೂಕಿನ ಅಮ್ಮಿನಭಾವಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸೊಳ್ಳೆ ನಿರ್ಮೂಲನಾ ದಿನ ಹಾಗೂ ಡೆಂಘೆ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆ ಸುತ್ತಲಿನ ವಾತಾವರಣದಲ್ಲಿ ನೀರು ನಿಲ್ಲದಂತೆ, ನಿರುಪಯುಕ್ತ ವಸ್ತು ಹಾಗೂ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಬಳಕೆಗೆ, ಕುಡಿಯಲು ಸಂಗ್ರಹಿಸುವ ನೀರಿನ ತೊಟ್ಟಿ ಹಾಗೂ ಸಂಗ್ರಹ ಉಪಕರಣಗಳ ಮೇಲೆ ಮುಚ್ಚಬೇಕು. ಇಂತಹ ಜಾಗೃತಿಗಳಿಂದಲೇ ರೋಗ ಮುಕ್ತರಾಗುಬಹುದು ಎಂದರು.
ಅಮ್ಮಿನಭಾವಿ ಗ್ರಾಪಂ ಅಧ್ಯೆಕ್ಷೆ ನೀಲಮ್ಮ ತಿದಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾಂತೇಶ್ವರ ಪ್ರೌಢಶಾಲೆ ವಿದ್ಯಾಥಿರ್ನೀಯರು ಪ್ರಸ್ತುತಪಡಿಸಿದ "ಡೆಂಗ್ಯೂ, ಡೆಂಗ್ಯೂ' ನಾಟಕ ಜನರ ಗಮನ ಸೆಳೆಯಿತು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮಂಜುನಾಥ ಸೊಪ್ಪಿಮಠ, ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾನಿಕ ವೈದ್ಯಾಧಿಕಾರಿ ಡಾ. ಬೀನಾ ಶೂರ್ಪಾಲಿ, ಗ್ರಾಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾಥಿರ್ಗಳು, ಇತರರು ಇದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಡಿ. ಚೆವರಡ್ಡಿ ಸ್ವಾಗತಿಸಿದರು. ಸವಿತಾ ಅಂಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net