ಸಕಾರಣವಿಲ್ಲದೆ ವಿನಾಯಿತಿ ಇಲ್ಲ

DC Divya Prabhu G.R.J
Published on

ಧಾರವಾಡ: ಲೋಕಸಭಾ ಚುನಾವಣೆಗಾಗಿ ಕರ್ತವ್ಯ ನಿರ್ವಹಿಸಲು ವಿವಿಧ ಹಂತದ ಸುಮಾರು ೧೦,೦೦೦ಕ್ಕೂ ಹೆಚ್ಚು ಸರ್ಕಾರಿ ಅಽಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಈಗಾಗಲೇ ಆದೇಶ ನೀಡಿ ಮೊದಲ ಹಂತದ ತರಬೇತಿ ನಡೆಯುತ್ತಿದೆ. ಆದರೆ, ಕೆಲ ಅಽಕಾರಿ, ಸಿಬ್ಬಂದಿ ವಿನಾಯಿತಿ ಕೇಳಿ ಅರ್ಜಿ ಸಲ್ಲಿಸುವುದು, ಇತರರಿಂದ ಶಿಪಾರಸು ಮಾಡಿಸುವುದು, ಅಪ್ರಸ್ತುತ ಕಾರಣ ಹೇಳುತ್ತಿದ್ದಾರೆ. ಅನಾರೋಗ್ಯ ಅಥವಾ ತೀರ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ನಿಯಮಾನುಸಾರ ಪರಿಶೀಲಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ಪರಿಶೀಲನಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ ದಿವ್ಯ ಪ್ರಭು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆರೋಗ್ಯ ಸಂಬAಽತ ಅರ್ಜಿಗಳನ್ನು ಮೆಡಿಕಲ್ ಬೋರ್ಡ್ ಮೂಲಕ ಪರಿಶೀಲಿಸಲಾಗುವುದು. ಅರ್ಜಿಯೊಂದಿಗೆ ಅಽಕೃತ ದಾಖಲೆ ಸಲ್ಲಿಸಬೇಕು. ಚುನಾವಣಾ ಕರ್ತವ್ಯದಿಂದ ಹೊರಗುಳಿಯಲು ಬೇರೆಯವರಿಂದ ಶಿಪಾರಸುಗಳನ್ನು ಮಾಡಿಸುವಂತಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ, ಆಲಸ್ಯ, ಉದಾಸೀನತೆ ತೊರುವ ಹಾಗೂ ಪಾರದರ್ಶಕವಾಗಿ ಕೆಲಸ ಮಾಡದವರ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುವುದು. ನೆಪ ಹೇಳದೆ ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಚುನಾವಣಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net