

ಕಾರ್ಗಲ್: ಬ್ರಿಟಿಷ್ ಬಂಗಲೆ ಸಮೀಪದ ರಾಜಾಟಾಪ್ ನೆತ್ತಿಯ ಮೇಲಿನಿಂದ ಸೆರೆಹಿಡಿಯಲಾದ ವಿಶ್ವವಿಖ್ಯಾತ ಜೋಗ ಜಲಪಾತದ ಚಿತ್ರ ಇದು. ಜೋಗ ಜಲಪಾತದ ನಾಲ್ಕು ಜಲಪಾತಗಳ ಪೈಕಿ ರಾಜಾ ಜಲಪಾತವು ಕಣಿವೆಯ ಆಳಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯವಿದು.
ಇಲ್ಲಿನ ರಾಜಾಟಾಪ್ ಮೇಲೆ ಈ ಹಿಂದೆ ಮುಂಗಾರು ಮಳೆ ಚಿತ್ರೀಕರಣವಾದ ನಂತರ ಮುಂಗಾರು ಮಳೆ ಪಾಯಿಂಟ್ ಎಂದೇ ಖ್ಯಾತಿ ಪಡೆಯಿತು. ನಂತರ ಇಲ್ಲಿಗೆ ತೆರಳಲು ಪ್ರವಾಸಿಗರು ಮುಗಿಬಿದ್ದರು. ಸಾಕಷ್ಟು ಅವಘಡಗಳು ಸಂಭವಿಸಿದ ಕಾರಣ ಪೊಲೀಸ್ ಇಲಾಖೆ ಈ ಪ್ರದೇಶಕ್ಕೆ ಬೇಲಿ ಅಳವಡಿಸಿ ಅಲ್ಲಿಗೆ ತೆರಳುವುದನ್ನು ನಿಷೇಧಿಸಿತು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿ ತೆರಳುವುದನ್ನು ನಿಷೇಧಿಸಲಾಗಿದೆ.
ವಿಶ್ವ ವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದ್ದರೂ ಜಲಪಾತ ಬೀಳುವ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿಗೆ ಸೇರಿದೆ. ಪೊಲೀಸ್ ಇಲಾಖೆಯ ಬಂದೋಬಸ್ತ್ ಸೇರಿ ಈ ಪ್ರದೇಶದ ಯಾವುದೇ ವಿಚಾರಗಳನ್ನು ಸಿದ್ದಾಪುರ ತಾಲೂಕಿನವರು ನಿರ್ವಹಿಸುತ್ತಾರೆ.