ಕೇರಳದಿಂದ ಕರ್ನಾಟಕ ಪ್ರವೇಶಕ್ಕೆ ಮತ್ತೆ ನಿರ್ಬಂಧ

Kerala Karnataka Border
Published on

ಮಂಗಳೂರು: ಕೇರಳದಿಂದ ಗಡಿ ದಾಟಿ ರಾಜ್ಯ ಪ್ರವೇಶಿಸುವವರಿಗೆ ಕರ್ನಾಟಕ ಸರ್ಕಾರ ಮತ್ತೆ ನಿರ್ಬಂಧ ವಿಧಿಸಿದೆ.

ಕೇರಳದಿಂದ ಕರ್ನಾಟಕಕ್ಕೆ ಬರುವವರು ಇನ್ನು 78 ಗಂಟೆಯೊಳಗಿನ ಅವಧಿಯ ಆರ್‌ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಹೊಂದಿರಬೇಕು. ಕೇರಳದಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿರುವ ಹಾಗೂ ಕರೊನಾ ಸೋಂಕು ಪ್ರಮಾಣ ಇನ್ನೂ ಶೇ.10 ಪ್ರಮಾಣದಲ್ಲಿರುವ ಕಾರಣ ಈ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ತಲಪಾಡಿ, ಸಾರಡ್ಕ ಸಹಿತ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಡಿಯಲ್ಲಿರುವವರು ವೈದ್ಯಕೀಯ ಸೌಲಭ್ಯಗಳಿಗೆ ದಕ್ಷಿಣ ಕನ್ನಡವನ್ನು ಅವಲಂಬಿಸಿರುವ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಅವರು ಆರ್‌ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಹೊಂದಿರುವುದು ಅವಶ್ಯ. ವರದಿ ಇಲ್ಲದಿದ್ದವರಿಗೆ ಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲು ವ್ಯವಸ್ಥೆ ಇದೆ. ಗಡಿಯಲ್ಲಿ ಸೋಮವಾರವೇ ತಪಾಸಣೆ ಆರಂಭವಾಗಿದ್ದು, ಮಂಗಳವಾರದಿಂದ ಈ ತಪಾಸಣೆ ವ್ಯವಸ್ಥೆ ಬಲಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net