ಜನವರಿ ೫ರಂದು ಇಲ್ಲಿ ವಿದ್ಯುತ್ ಇರಲ್ಲ

Electricity
Published on

ಕಲಬುರಗಿ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-೧ರ ವ್ಯಾಪ್ತಿಯಲ್ಲಿ ಬರುವ ೧೧೦/೩೩/೧೧ಕೆವಿ ಕಲಬುರಗಿ (ಪಶ್ಚಿಮ) ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೋಗುವ ಹೈಕೋರ್ಟ್, ಹಡಗಿಲ ಹಾರುತಿ, ಗೊಬ್ಬುರ(ಬಿ) ವಿತರಣಾ ಕೇಂದ್ರದ ಅಡಿ ನಿರ್ವಹಣಾ ಕಾರ್ಯಕೈಗೊಂಡಿರುವ ನಿಮಿತ್ತ ಜನವರಿ ೫ರಂದು ಬೆಳಗ್ಗೆ ೧೧ರಿಂದ ಸಂಜೆ ೫ರವರೆಗೆ ಮೂರು ಫೀಡರ್ ವ್ಯಾಪ್ತಿಯಲ್ಲಿ ಬರುವ ನಗರದ ಬಡಾವಣೆಗಳಲ್ಲಿ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹಡಗಿಲ ಹಾರುತಿ,ಮೇಳಕುಂದಾ,ಮಿಣಜಗಿ,ಶರಣ ಸಿರಸಗಿ,ಸಾವಳಗಿ, ಹುಣಸಿ ಹಡಗಿಲ, ಕಣ್ಣಿ, ಗೌರ ಬಿ, ಗೋಳನೂರ, ಶರಣ ಶಿರಸಗಿ, ಬಬಲಾದ, ಕಾಡನಾಳ ಹಾಗೂ ಕೊಳ್ಳೂರು,ಗೊಬ್ಬುರ, ಬಿದನೂರ,ಹಾವನೂರ,ಗೊಬ್ಬುರ (ಬಿ), ಹಾವನೂರ, ಬಿದನೂರ, ಅವರಳ್ಳಿ, ಗೊಬ್ಬುರ ವಾಡಿ,ನೀಲೂರ, ವಡ್ಡಳ್ಳಿ, ವಡ್ಡಳ್ಳಿ ತಾಂಡಾದಲ್ಲಿ ಮತ್ತು ಕಲಬುರಗಿ ನಗರದ ಸಿರಸಗಿ ಮಡ್ಡಿ, ಅಕ್ಕಮಹಾದೇವಿ ಕಾಲನಿ, ಐಟಿ ಪಾರ್ಕ್, ಮಾದಸರನಹಳ್ಳಿ ಮೊದಲಾದ ಕಡೆ ವಿದ್ಯುತ್ ಸರಬರಾಜು ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net