

ಹುಬ್ಬಳ್ಳಿ: ಪ್ರತಿಯೊಬ್ಬರು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು ಮತ್ತು ಒಳ್ಳೆಯ ಆಹಾರ ನಿಯಮಿತವಾಗಿ ಸರಿಯಾಗಿ ತೆಗೆದುಕೊಳ್ಳಬೇಕು ಎಂದು ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಹೇಳಿದರು.
ಇಲ್ಲಿಯ ಮಹಾವೀರ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ವ್ಯಸನ ಮುಕ್ತ ಆರೋಗ್ಯಕರ ಜೀವನ ನಡೆಸುವುದು ಹೇಗೆ? ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಿಯಾದ ನಿದ್ರೆ, ವ್ಯಾಯಮ, ಯೋಗಾಸನಗಳನ್ನು ರೂಢಿಸಿಕೊಂಡು, ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳನ್ನು ಮಾಡದಂತೆ ಇರಬೇಕು. ಇದರಿಂದ ಜೀವನ ಸುಧಾರಣೆಯತ್ತ ಸಾಗುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮೊದಲು ನಮ್ಮ ಆರೋಗ್ಯ ಸರಿ ಇರಬೇಕು ಎಂದು ತಿಳಿಸಿದರು.
ಅತಿಥಿಯಾಗಿದ್ದ ಪ್ರೊ. ವೀಣಾ ಟೋಣಪಿ ಅವರು, ವಿದ್ಯಾಥಿರ್ಗಳಿಗೆ ವ್ಯಸನ ಮುಕ್ತ ಆರೋಗ್ಯಕರ ಜೀವನ ಯಾವ ರೀತಿ ನಡೆಸಬಹುದು ಎಂಬುದನ್ನು ಚಿತ್ರಗಳ ಸಮೇತ ಪ್ರಾತ್ಯಕ್ಷಿಕೆ ನೀಡಿದರು.
ಜಿ. ಶಾರದಾ, ಪ್ರಾಚಾರ್ಯ ಭಾಗ್ಯ ಬತುಲ್ಲಾ, ಎಚ್ಎಂ ಶೋಭಾ ಯಾವಾಗಲ್ಲ, ಪಾರ್ವತಿ ಶೀಲವಂತರ ಇತರರು ಭಾಗವಹಿಸಿದ್ದರು.
ಭಾಗ್ಯ ಸ್ವಾಗತಿಸಿದರು. ಶೋಭಾ ವಂದಿಸಿದರು.