ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಮೈತ್ರಿ ಸಮಗ್ರ ವ್ಯಸನಮುಕ್ತ ಪುನರ್ ವಸತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯತಿ ಸಾಮರ್ಥ್ಯ ಸೌಧನಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಮಾತನಾಡಿ, ಭಾರತವು ಯುವ ಜನಾಂಗದಿಂದ ಕೂಡಿದ ಸದೃಢ ದೇಶವಾಗಿದೆ. ಆದರೆ, ಯುವಕರು ಮಾದಕ ವಸ್ತುಗಳ ದಾಸರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ವ್ಯಸನಗಳಿಂದ ದೂರವಾಗಿ ಆರೋಗ್ಯಕರ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್ಆರ್ ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಭರತೇಶಗೌಡ ಪಾಟೀಲ ಮಾತನಾಡಿ, ಯುವ ಪೀಳಿಗೆಯು ಮಾರಕ ದುಶ್ಚಟಗಳಿಗೆ ದಾಸರಾಗದೇ, ನಶೆ ವಸ್ತುಗಳಿಂದ ದೂರವಿರಬೇಕು. ಸದೃಢರಾಗಬೇಕೆಂದು ತಿಳಿಸಿದರು.
ಮೈತ್ರಿ ಸಂಸ್ಥೆಯ ಮಂಜುನಾಥ ಮುದಿಗೌಡ್ರ, ಶಿವಾನಂದ ಚೌಗಲೆ, ಕಲ್ಮೇಶ್ ಬೆಳೆಬಾಳ ಅವರು ಮಾದಕ ದ್ರವ್ಯಗಳ ಹಾನಿ ಬಗ್ಗೆ ಅರಿವು ಮೂಡಿಸಿದರು.
ಎನ್ಆರ್ ಎಲ್ಎಂ ನಾಗಪ್ಪ ಹಂಚಿನಮನಿ ನಿರೂಪಿಸಿದರು. ಎಂ.ಆರ್.ಡಬ್ಲ್ಯೂ ಮಹಾಂತೇಶ ಕುರ್ತಕೋಟಿ ವಂದಿಸಿದರು.