ಬಾರದ ಕಳೆದ ವರ್ಷದ ಬರ ಪರಿಹಾರ

Published on

ಹುಬ್ಬಳ್ಳಿ: ಬರ ಪರಿಹಾರ ಎಂಬುದು ರೈತರಿಗೆ ವರ್ಷದಿಂದ ವರ್ಷಕ್ಕೆ ಮರೀಚಿಕೆಯಾಗುತ್ತಿದೆ. 2023ರ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಬರದಿಂದಾಗಿ ಕೈ ಸೇರಲಿಲ್ಲ. ಬರಗಾಲ ಘೋಷಣೆಯಾದರೂ ಕೇವಲ ಶೇ. 30ರಷ್ಟು ರೈತರಿಗೆ ಪರಿಹಾರ ಸಿಕ್ಕಿದೆ. ಉಳಿದ ರೈತರು ಇದರಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ ಆಗ್ರಹಿಸಿದ್ದಾರೆ.

ರೈತ ದೇಶದ ಬೆನ್ನೆಲುಬು ಎಂದು ಹೇಳುವ ರಾಜಕಾರಣಿಗಳು ಅಧಿಕಾರಿಗಳಿಗೆ ತಾಕೀತು ಮಾಡಿ ಬರ ಪರಿಹಾರ ಸರಿಯಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು.

ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಹಸ್ತಾಂತರ ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ. ಪರಿಹಾರ ಸಿಗದ ರೈತರು ಬೇಸತ್ತು ಹೋಗಿದ್ದಾರೆ. ಈ ವರ್ಷದ ಹಿಂಗಾರು ಉತ್ತಮವಾಗಿದ್ದು, ಬಿತ್ತನೆ ಮಾಡಲು ಬೀಜ, ಗೊಬ್ಬರ ಖರೀದಿಸಲು ಅನುಕೂಲವಾಗುವಂತೆ ಕಳೆದ ವರ್ಷದ ಬರ ಪರಿಹಾರ ಕೂಡಲೇ ನೀಡಬೇಕೆಂದು ಕಿರೇಸೂರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net