ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡುತ್ತಿಲ್ಲ

sugar cane
Published on

ಕೆ.ಎಂ.ದೊಡ್ಡಿ : ಕಬ್ಬಿನ ತೂಕದಲ್ಲಿ ಚಾಂಶುಗರ್ಸ್‌ ಕಾರ್ಖಾನೆ ವ್ಯತ್ಯಾಸ ಮಾಡುತ್ತಿದೆ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿದ್ದು ಇದಕ್ಕೆ ರೈತರು ಕಿವಿಗೊಡಬೇಡಿ ಎಂದು ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ಮಣಿ ಮನವಿ ಮಾಡಿದರು.


ಚಾಂಶುಗರ್ಸ್‌ ಕಾರ್ಖಾನೆ ರೈತಪರ ಕಾಳಜಿ ಹೊಂದಿದ್ದು, ರೈತರಿಗೆ ಅನ್ಯಾಯ ಮಾಡುವಂತಹ ಕೆಲಸವನ್ನು ಕಾರ್ಖಾನೆ ಇತಿಹಾಸದಲ್ಲೆ ಮಾಡಿಲ್ಲ. ಈ ಹಿಂದೆ ಕಬ್ಬಿನ ಬಾಕಿ ಹಣ ವಿಳಂಬವಾಗಿದ್ದು, ಹೊರತು ಪಡಿಸಿ ತೂಕದಲ್ಲಿ ಮೋಸ ಮಾಡುವ ಕೆಲಸವನ್ನು ಕಾರ್ಖಾನೆ ಇತಿಹಾಸದಲ್ಲೆ ಮಾಡಿಲ್ಲ. ಅದು ಕಾರ್ಖಾನೆಯ ಆಡಳಿತ ಮಂಡಳಿಗೂ ಅವಶ್ಯಕತೆ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ರೈತರು ಕಾರ್ಖಾನೆಯ ಮೇಲೆ ವಿಶ್ವಾಸ, ನಂಬಿಕೆ ಇಟ್ಟಿದ್ದು ಅದಕ್ಕೆ ಅಪಚಾರವಾಗುವಂತಹ ಕೆಲಸವನ್ನು ಕಾರ್ಖಾನೆಯ ಆಡಳಿತ ಮಂಡಳಿ ಎಂದಿಗೂ ಮಾಡುವುದಿಲ್ಲ. ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ರೈತರ ನಡುವೆ ಉತ್ತಮ ಸಂಬಂಧ ಇದ್ದು, ಅದಕ್ಕೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಕಬ್ಬಿನ ತೂಕದಲ್ಲಿ ಮೊಸ ಮಾಡುತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಸಹಾಯಕ ಪ್ರಧಾನ ವ್ಯವಸ್ಥಾಪಕ(ಕಬ್ಬು ವಿಭಾಗ) ಮಹದೇವಪ್ರಭು, ವ್ಯವಸ್ಥಾಪಕ ಶಿವಪ್ಪ, ಸಹಾಯಕ ವ್ಯವಸ್ಥಾಪಕ ನಿತೀಶ್, ನಿಂಗಯ್ಯ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net