ಮೋದಿಯಿಂದ ಅಭಿವೃದ್ಧಿ ಕಾರ್ಯಗಳಾಗಿಲ್ಲ

No development works by Modi
ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ತೌಫಿಕ್ ಪಾರ್ಥನಳ್ಳಿ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸುದ್ದಿಗಾರರೊಂದಿಗೆ ಮಾತನಾಡಿದರು, ಶಂಕರ ಕಾಂಬಳೆ, ಅಬೂಬಕರ್ ಕುಡಚಿ, ಧರೆಪ್ಪ ಸಾಂಗ್ಲೀಕರ, ಉದಯ ಸಾರವಾಡ ಇತರರಿದ್ದರು.
Published on

ಜಮಖಂಡಿ: ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ದುರ್ಬಲ ಪ್ರಧಾನಿಯಾಗಿದ್ದಾರೆ. ಅವರು ಎಲ್ಲವನ್ನೂ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಗುರುವಾರ ನಗರದ ಕಾಂಗ್ರೆಸ್ ಮುಖಂಡ ತೌಫಿಕ್ ಪಾರ್ಥನಳ್ಳಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿ ಮೋದಿ 10 ವರ್ಷದಲ್ಲಿ ಒಂದು ಬಾರಿಯಾದರೂ ಸುದ್ದಿಗೋಷ್ಠಿ ನಡೆಸಿದ್ದಾರಾ? ಮಾಧ್ಯಮಗಳಿಗೆ ಹೆದರಿ ವೇದಿಕೆಗಳಲ್ಲಿ ಸುಳ್ಳು ಹೇಳುತ್ತ ಜನರಿಗೆ ಮೋಡಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 25ಕ್ಕೂ ಅಧಿಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ರಾಜ್ಯ ಮತ್ತು ದೇಶದ ಪ್ರಜ್ಞಾವಂತರು, ಯುವಕರು ದೇಶದ ಅಭಿವೃದ್ಧಿ, ಬಡವರ ಅಭಿವೃದ್ಧಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.

ದೇಶ ರಕ್ಷಣೆಯಾಗಬೇಕಾದರೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಲೋಕಸಭೆ ಅಭ್ಯರ್ಥಿ ಸಂಯುಕ್ತ ಪಾಟೀಲ ವಿದ್ಯಾವಂತೆಯಾಗಿದ್ದು, ಜನರ ನಾಡಿಮಿಡಿತಕ್ಕೆ ಸ್ಪಂದಿಸಲಿದ್ದಾರೆ. ಪಾರ್ಲಿಮೆಂಟ್‌ಲ್ಲಿ ಧ್ವನಿ ಎತ್ತುವ ತಾಕತ್ತು ಹೊಂದಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಆಯ್ಕೆಯಾಗುವುದು ನಿಶ್ಚಿತ ಎಂದರು.

ಮುಖಂಡ ತೌಫಿಕ್ ಪಾರ್ಥನಳ್ಳಿ, ಶಂಕರ ಕಾಂಬಳೆ, ಅಬೂಬಕರ್ ಕುಡಚಿ, ಧರೆಪ್ಪ ಸಾಂಗ್ಲೀಕರ, ಉದಯ ಸಾರವಾಡ, ದಾನೇಶ ತಡಸಲೂರ, ರಾಜು ಜಂಬಗಿ, ಶಶಿಧರ ಮೀಸಿ, ಸೂರಜ ಕುಡ್ರಾಣಿ, ನದೀಮ್ ಗೋಠೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net