

ಚೌತಿ ಹಬ್ಬಕ್ಕೆ ಕಬ್ಬು ವ್ಯಾಪಾರವಾಗಿಲ್ಲ ಎಂದು ಕಬ್ಬು ಬೆಳೆಗಾರರು ಹತಾಶರಾಗುವುದು ಬೇಡ. ಮಳೆಗಾಲ ಮುಗಿದ ಕೂಡಲೇ ಬೆಲ್ಲ ತಯಾರಿಗೆ ರೈತರು ಬೆಳೆದ ಕಬ್ಬನ್ನು ನ್ಯಾಯಯುತ ಬೆಲೆಗೆ ಖರೀದಿಸುವ ಬಗ್ಗೆ ರೈತ ಸಂಘ ಜಿಲ್ಲಾಡಳಿತದ ಗಮನ ಸೆಳೆಯಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜೇಶ್ ನಾಕ್ ಅವರೊಂದಿಗೆ ಚರ್ಚೆ ನಡೆಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರು ತಾಳ್ಮೆ ವಹಿಸುವುದು ಅಗತ್ಯ. ಮನೋಹರ ಶೆಟ್ಟಿ, ರೈತ ಸಂಘ ಹಸಿರುಸೇನೆ ಕಾರ್ಯದರ್ಶಿ ಹಬ್ಬಗಳ ಸಂದರ್ಭ ಕಬ್ಬಿಗೆ ವಿಶೇಷ ಸ್ಥಾನ ಇರುವುದರಿಂದ ಹೆಚ್ಚು ಆದಾಯವಿಲ್ಲದಿದ್ದರೂ ಪ್ರತಿವರ್ಷ ನಾಲ್ಕು ಗ್ರಾಮಗಳಲ್ಲಿ ಕೃಷಿಕರು ಕಬ್ಬು ಬೆಳೆಯುತ್ತಿದ್ದರು. ಈ ವರ್ಷ ಕರೊನಾದಿಂದ ಹಬ್ಬಗಳಿಲ್ಲದೆ ಬೆಳೆಸಿದ ಕಬ್ಬು ನಿಷ್ಪ್ರಯೋಜಕವಾಗುತ್ತಿದೆ. ಭಾಸ್ಕರ ರೈ ಕಬ್ಬು ಬೆಳೆಗಾರ ಬಳ್ಕುಂಜೆಯಲ್ಲಿ ಸುಮಾರು ಎರಡೂವರೆ ಲಕ್ಷದಷ್ಟು ಕಬ್ಬು ಇದೆ. 45 ಕುಟುಂಬ ಇಲ್ಲಿ ಕಬ್ಬು ಬೆಳೆಸುತ್ತಿವೆ. ಚೌತಿ ಸಂದರ್ಭ ಮೂಲ್ಕಿ, ಸುರತ್ಕಲ್, ಕಾಪು, ಉಡುಪಿ, ಕಾರ್ಕಳಕ್ಕೆ ಇಲ್ಲಿಂದಲೆ ಕಬ್ಬು ಹೋಗುತ್ತಿತ್ತು. ಆದರೆ ಕರೊನಾದಿಂದಾಗಿ ಈ ಬಾರಿ ಕಬ್ಬು ವ್ಯಾಪಾರವಾಗದೆ ಉಳಿದಿವೆ. ಗೋಪಾಲ ಭಂಡಾರಿ, ಕಬ್ಬು ಬೆಳೆಗಾರರು, ಬಳ್ಕುಂಜೆ