ವಿದ್ಯಾರ್ಥಿಗಳಿಗಿಲ್ಲ ಸೈಕಲ್ ಪಠ್ಯಪುಸ್ತಕಕ್ಕಿಲ್ಲ ತೊಂದರೆ

Student Cycle
Published on

ಬೆಂಗಳೂರು: ಈ ವರ್ಷ ಶಾಲೆ ಆರಂಭವಾದರೂ ವಿದ್ಯಾರ್ಥಿಗಳಿಗೆ ಸೈಕಲ್ ಸಿಗೋದಿಲ್ಲ. ಶಾಲೆ ಆರಂಭದ ಅನಿಶ್ಚಿತತೆ ಮತ್ತು ಆಥಿರ್ಕ ಬಿಕ್ಕಟ್ಟಿನಿಂದಾಗಿ ರಾಜ್ಯ ಸರ್ಕಾರ ಈ ವರ್ಷ ಸೈಕಲ್ ಖರೀದಿಯನ್ನು ಕೈ ಬಿಡಲು ನಿರ್ಧರಿಸಿದೆ. ಇತ್ತೀಚಿಗೆ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ರ್ಚಚಿಸಲಾಯಿತು. ಈ ವೇಳೆ ಸಮವಸ್ತ್ರ, ಪಠ್ಯಪುಸ್ತಕ ನೀಡಿ ಸೈಕಲ್​ಗಳನ್ನು ಮುಂದಿನ ವರ್ಷ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಈಗಾಗಲೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮವಸ್ತ್ರಕ್ಕಾಗಿ ಟೆಂಡರ್ ಕರೆದು, ರಾಜ್ಯ ಸರ್ಕಾರ ಸ್ವಾಮ್ಯದ ಕಂಪನಿ ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ(ಕೆಎಚ್​ಡಿಸಿ)ಮತ್ತು ಇತರೆ ಖಾಸಗಿ ಸಂಸ್ಥೆಗಳಿಗೆ ಕಾರ್ಯದೇಶವನ್ನು ಸಹ ನೀಡಿದೆ. ಆದರೆ, ಸೈಕಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿರಲಿಲ್ಲ. ಈ ಬಾರಿ ಎಂದಿನಿಂದ ಶಾಲೆ ಆರಂಭಿಸುತ್ತೇವೆ ಎಂಬುದರ ಬಗ್ಗೆ ಇಲಾಖೆಗೆ ಸ್ಪಷ್ಟತೆ ಇಲ್ಲದಿರುವುದರಿಂದ ಸೈಕಲ್ ನೀಡದೇ ಇರುವುದು ಉತ್ತಮ ಎಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಜೆಟ್ ಎಷ್ಟು?: 2019-20ನೇ ಸಾಲಿನಲ್ಲಿ ಬೈಸಿಕಲ್ ಖರೀದಿಗೆ 180 ಕೋಟಿ ರೂ. ವೆಚ್ಚ ಮಾಡಿತ್ತು. ಒಂದು ವೇಳೆ ಸೈಕಲ್ ಜತೆಗೆ ಶೂ ಮತ್ತು ಸಾಕ್ಸ್ ನೀಡುವುದನ್ನು ಸಹ ರದ್ದು ಮಾಡಿದರೆ, ರಾಜ್ಯ ಸರ್ಕಾರಕ್ಕೆ 300 ಕೋಟಿ ರೂ.ಗಳ ಉಳಿತಾಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net