

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಲಾಕ್ಡೌನ್ ಸಡಿಲಿಕೆ ವಿನಾಯಿತಿ ನೀಡಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಏ.21ರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಿದೆ. ಜತೆಗೆ ಫ್ಯಾನ್, ಎ.ಸಿ. ಮೊದಲಾದ ಎಲೆಕ್ಟ್ರಿಕಲ್, ವಾಹನ, ಮೊಬೈಲ್ ದುರಸ್ತಿ ಹಾಗೂ ಕರೆನ್ಸಿ ರಿಚಾರ್ಜ್ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಬಹುದು. ಹಾಲಿನ ಸಂಸ್ಕರಿತ ಉತ್ಪನ್ನಗಳ ಘಟಕ, ಬ್ರೆಡ್ ಕಾರ್ಖಾನೆ, ಕೃಷಿ ಗಿರಣಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಕಡಿಮೆ ಸಿಬ್ಬಂದಿಯೊಂದಿಗೆ ಆರಂಭಿಸಲು ಅವಕಾಶ ನೀಡಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಕಾರಣ ಸಡಿಲಿಕೆ ಲಭ್ಯವಿರುವುದಿಲ್ಲ.
ನಗರ ಮತ್ತು ಪುರಸಭೆ ಹೊರವ್ಯಾಪ್ತಿಯಲ್ಲಿರುವ ಔಷಧ ಉತ್ಪಾದನೆ, ವೈದ್ಯಕೀಯ ಉಪಕರಣಗಳ ತಯಾರಿಕೆ, ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಕಲ್ಲಿದ್ದಲು ಮತ್ತು ಗಣಿಗಾರಿಕೆ ಮತ್ತು ಅವುಗಳ ಸಾಗಣೆಗೆ ಅವಕಾಶ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಲು ಅವಕಾಶವಿಲ್ಲ. ಇನ್ನು ಕ್ಷೌರದಂಗಡಿ, ರೆಸ್ಟೋರೆಂಟ್ ಹಾಗೂ ಮದ್ಯದ ಅಂಗಡಿಗಳನ್ನು ತೆರೆಯದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆೆ. ತರಕಾರಿ, ದಿನಸಿ, ಔಷಧ ಮಾರಾಟ: ದಿನಸಿ ಅಂಗಡಿಗಳು, ತರಕಾರಿ ಮತ್ತು ಹಣ್ಣು, ಹಾಲು ಹಾಗೂ ಔಷಧಗಳ ಮಾರಾಟ ಎಂದಿನಂತೆ ಇರಲಿದೆ. ಶೇ.60 ಬೇಕರಿಗಳು ಕಾರ್ಯ ನಿರ್ವಹಿಸುತ್ತಿವೆ. ಅನಗತ್ಯವಾಗಿ ಸಂಚರಿಸುವವರ ವಾಹನ ಜಪ್ತಿ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.
ಮಹಾನಗರದಲ್ಲಿ ಇವುಗಳನ್ನು ತೆರೆಯಲು ಅವಕಾಶವಿಲ್ಲ..
ವಾಹನಗಳ ದುರಸ್ತಿ, ಕರೆನ್ಸಿ, ಮೊಬೈಲ್ ಅಂಗಡಿಗಳು, ಸಲೂನ್ ಹಾಗೂ ಸಣ್ಣ ಕೈಗಾರಿಕೆಗಳು ತೆರೆದಿರುವ ಬಗ್ಗೆ ಮಾಹಿತಿ ಬಂದರೆ ಕೂಡಲೇ ಅವುಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗುವುದು. ಸಡಿಲಿಕೆ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ಮಾಡಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸಿಎಂ ಬಳಿ ಚರ್ಚೆ ಮಾಡಿ ಯಾವ ಅಂಶಗಳನ್ನು ಜಾರಿಗೊಳಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಬೆಂಗಳೂರಿ ನಲ್ಲಿ ಲಾಕ್ಡೌನ್ ಸಡಿಲಿಕೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಪೌರಕಾರ್ವಿುಕನಿಗೆ ಖಾಕಿ ಸನ್ಮಾನ
ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಹಲಸೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರತಿದಿನ ಔಷಧಿ ಸಿಂಪಡಣೆ ಮಾಡುತ್ತಿದ್ದ ಪೌರ ಕಾರ್ವಿುಕ ಶೇಖರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೊಲೀಸರು ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪೌರಕಾರ್ವಿುಕರು ಪ್ರತಿನಿತ್ಯ ನಗರದ ಹಲವೆಡೆ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಕರೊನಾ ಭೀತಿಯಿಂದ ಲಾಕ್ಡೌನ್ ಘೋಷಣೆಯಾದ ಬಳಿಕ ಶೇಖರ್ ಅವರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ರಿಂದ 6 ಕಿ.ಮೀ ವ್ಯಾಪ್ತಿಯಲ್ಲಿ ಔಷಧಿ ಸಿಂಪಡಿಸುತ್ತಿದ್ದರು. ಪೊಲೀಸರು ಕಾರ್ಯ ನಿರ್ವಹಿಸುವ ಚೆಕ್ ಪೋಸ್ಟ್ ಹಾಗೂ ಠಾಣೆ ಬಳಿಯೂ ಔಷಧಿ ಸಿಂಪಡಿಸುತಿದ್ದರು. ಶೇಖರ್ ಕೆಲಸ ಗುರುತಿಸಿದ ಹಲಸೂರು ಸಂಚಾರ ಠಾಣೆ ಪೊಲೀಸರು ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಮಹಿಳಾ ಸಿಬ್ಬಂದಿ ಈತನಿಗೆ ಆರತಿ ಬೆಳಗಿದರೆ, ಎಲ್ಲ ಪೊಲೀಸರು ಸೆಲ್ಯೂಟ್ ಹೊಡೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಬೆಂಗ