ನಗರಸಭೆ ಅಧ್ಯೆಕ್ಷೆ ವಿರುದ್ಧ ಅವಿಶ್ವಾಸ?

klr
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಕೋಲಾರ ನಗರಸಭೆ ಅಧ್ಯೆ ಲಕ್ಷಿ ದೇವಮ್ಮ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದು, ಸ್ವ ಪಕ್ಷದ ಸದಸ್ಯರಿಂದಲೇ ಈಗ ಅವಿಶ್ವಾಸ ಮಂಡನೆಗೆ ತೆರೆ ಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ!

ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್​ 12, ಜೆಡಿಎಸ್​ 8, ಬಿಜೆಪಿ 3, ಎಸ್​ಡಿಪಿಐ 4 ಹಾಗೂ ಪಕ್ಷೇತರ 8 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​, ಎಸ್​ಡಿಪಿಐ ಹಾಗೂ ಪಕ್ಷೇತರ ಕೆಲ ಸದಸ್ಯರು ಕಾಂಗ್ರೆಸ್​ ಸೇರಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್​ ಅಹಮದ್​, ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ಕುಮಾರ್​ ಅಧ್ಯಕ್ಷ ಸ್ಥಾನಕ್ಕೆ ಲಕ್ಷಿ$್ಮದೇವಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಹೆಸರನ್ನು ಸೂಚಿಸಿದ್ದರು. ಆದರೆ, ಲಕ್ಷಿ$್ಮದೇವಮ್ಮ ಹೆಸರು ಸೂಚನೆಗೆ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಅರಿತ ನಾಯಕರು ಸದಸ್ಯರನ್ನು ಕರೆಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವಂತೆ ಮನವೊಲಿಸಿದ್ದರು.

ಶಾಸಕ, ಎಂಎಲ್ಸಿಗಳ ಮಾತಿಗೆ ಮಣಿದಿದ್ದ ಸದಸ್ಯರು ಲಕ್ಷಿ$್ಮದೇವಮ್ಮಗೆ ಬೆಂಬಲ ನೀಡಿ 2024ರ ಆಗಸ್ಟ್​ 27ರಂದು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಅಧಿಕಾರಕ್ಕೆ ಬಂದು 6 ತಿಂಗಳು ಕಳೆಯುತ್ತಿದೆ. ಆದರೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಸಭೆ ನಡೆಸುವುದು, ನಗರ ಅಭಿವೃದ್ಧಿಗೆ ಚರ್ಚೆಗೆ ಮುಂದಾಗಿಲ್ಲ ಎಂಬ ಅಸಮಾಧಾನ ಸ್ವಪಕ್ಷದಲ್ಲೇ ಅಸಮಾಧಾನ ಶುರುವಾಗಿದೆ.

ಅಸಮಾಧಾನಗೊಂಡಿರುವ ಕಾಂಗ್ರೆಸ್​ ಸದಸ್ಯರು, ಜೆಡಿಎಸ್​ ಸೇರಿ ಪಕ್ಷೇತರ ಕೆಲ ಸದಸ್ಯರು ಅವಿಶ್ವಾಸ ಮಂಡನೆ ಮಾಡಲು ಮುಂದಾಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್​ ಸದಸ್ಯರೊಬ್ಬರ ಮನೆಯಲ್ಲಿ ಅವಿಶ್ವಾಸ ಮಂಡನೆ ಕುರಿತು ಎರಡ್ಮೂರು ಸುತ್ತು ಸಭೆಗಳು ನಡೆದಿದ್ದು, ಕೆಲವರು ಖುದ್ದು ಹಾಗೂ ಇನ್ನು ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವಿಶ್ವಾಸಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದಾರೆ ಎನ್ನಲಾಗುತ್ತಿದೆ.

ಆಡಳಿತ ವ್ಯವಸ್ಥೆ ಸರಿಪಡಿಸುವಲ್ಲಿ ವಿಫಲ

ಅಧ್ಯಕ್ಷರು ಆಡಳಿತ ವ್ಯವಸ್ಥೆ ಸರಿಪಡಿಸುವಲ್ಲಿ ವಿಲರಾಗಿದ್ದಾರೆ. ಸದಸ್ಯರ ಬೇಡಿಕೆಗೆ ಸ್ಪಂದಿಸುತ್ತಿಲ್ಲ, ಸಾರ್ವಜನಿಕರಿಗೆ ಕಚೇರಿಯಲ್ಲಿ ಸಿಗುವುದಿಲ್ಲ ಎಂಬ ಆರೋಪಗಳು ಕೇಳಿವೆ ಬಂದಿವೆ. ನಗರದಲ್ಲಿ ಬಹುತೇಕ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು ಅಭಿವೃದ್ಧಿಪಡಿಸಲು ಯತ್ನಿಸುತ್ತಿಲ್ಲ, ಶಾಸಕರ ಮೇಲೆ ಒತ್ತಡ ತಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಕೆಲಸ ಮಾಡಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಸ್ಯರ ಮಾತಿಗೂ ಬೆಲೆಯಿಲ್ಲ!

ಸಾರ್ವಜನಿಕರು ಇ&ಆಸ್ತಿ ದಾಖಲೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ, ತಿಂಗಳಾನುಗಟ್ಟಲೆ ಅಧಿಕಾರಿ, ಸಿಬ್ಬಂದಿ ಅಲೆದಾಡಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರಿಂದಲೇ ಸಾಕಷ್ಟು ದೂರು ಬಂದಿದ್ದರೂ ವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ. ಅವರಿಗೆ ಸಾರ್ವಜನಿಕರ ಬಗ್ಗೆ ಕಾಳಜಿಯಿಲ್ಲ ಎಂಬುದು ಕೆಲ ಸದಸ್ಯರ ವಾದ.

 ಸರ್ಕಾರದಿಂದ ಹಣ ಬಂದಿಲ್ಲ

ಸಭೆಗಳಲ್ಲಿ ಯಾರನ್ನೂ ಕಡೆಗಣಿಸಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿಯಮಗಳ ಪ್ರಕಾರ ಸಭೆ ನಡೆಸಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುದಾನ ಬಂದಿಲ್ಲ, ಹೆಚ್ಚು ಹಣ ಬಿಡುಗಡೆಗೊಳಿಸಿಕೊಡಲು ಶಾಸಕರಿಗೆ, ಎಂಎಲ್ಸಿಗಳಿಗೆ ಮನವಿ ಮಾಡಲಾಗಿದೆ. ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ ಎಂದು ಅಧ್ಯೆ ಲಕ್ಷಿ$್ಮದೇವಮ್ಮ ಪ್ರತಿಕ್ರಿಯಿಸಿದರು.

ಅವಿಶ್ವಾಸ ಮಂಡನೆಯ ಪ್ರಯತ್ನದ ಬಗ್ಗೆ ಗಮನಕ್ಕೆ ಇಲ್ಲ. ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್ಸಿಗಳಾದ ನಜೀರ್​ ಅಹಮದ್​, ಎಂ.ಎಲ್​.ಅನಿಲ್​ ಕುಮಾರ್​ ಅವರ ಬೆಂಬಲ ಇರುವ ತನಕ ಪೂರ್ಣ ಅಧಿಕಾರದಲ್ಲಿ ಮುಂದುವರಿಯುತ್ತೇನೆ.

- ಲಕ್ಷ್ಮೀ ದೇವಮ್ಮ 

ಅಧ್ಯೆಕ್ಷೆ, ನಗರಸಭೆ, ಕೋಲಾರ

ವಾರ್ಡ್​ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ. ನಗರಸಭೆ ಆಡಳಿತ ಸರಿಪಡಿಸುವಲ್ಲಿ ಅಧ್ಯಕ್ಷರು ವಿಲರಾಗಿದ್ದಾರೆ. ಯಾವುದೇ ವಿಚಾರದಲ್ಲಿ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ.

- ಹೆಸರು ಹೇಳಲು ಇಚ್ಛಿಸದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net